ಕಾಂಗ್ರೆಸ್‌ಗೆ ದೇಶದ ಜನ, ಸೇನೆ,ಇವಿಎಂ ಯಾವುದರ ಮೇಲೂ ವಿಶ್ವಾಸವಿಲ್ಲ: ಮೋದಿ

7

ಕಾಂಗ್ರೆಸ್‌ಗೆ ದೇಶದ ಜನ, ಸೇನೆ,ಇವಿಎಂ ಯಾವುದರ ಮೇಲೂ ವಿಶ್ವಾಸವಿಲ್ಲ: ಮೋದಿ

Published:
Updated:

ನವದೆಹಲಿ: ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ರಫೆಲ್‌ ಹಗರಣ ಪ್ರಸ್ತಾಪಿಸಿ ಮಾತಿನ ಮಧ್ಯೆ ಕೆಲ ಯಡವಟ್ಟು ಮಾತುಗಳನ್ನೂ ಆಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಬಂದು ಅವರನ್ನು ಆಲಂಗಿಸಿದರು, ಅದಕ್ಕೂ ಮುನ್ನ ‘ಏಳಿ, ಬೇಗ ಎದ್ದೇಳಿ’ ಎಂದೂ ಕೇಳಿಕೊಂಡರು. ಇಂಥಹ ಅನಿರೀಕ್ಷಿತ ಘಟನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಸ್ವಾರಸ್ಯಕರವಾಗಿ ವಿಶ್ಲೇಷಿಸಿದರು. ಅದರ ಹಲವು ಸಂಗತಿಗಳು ಇಲ್ಲಿವೆ. 

ಅವಿಶ್ವಾಸ ನಿರ್ಣಯದ ಮೇಲೆ ಶುಕ್ರವಾರ ಬೆಳಿಗ್ಗೆ 11ರಿಂದ ರಾತ್ರಿ 11ರವರೆಗೆ ನಡೆದ 12 ತಾಸುಗಳ ಸುಧೀರ್ಘ ಚರ್ಚೆಯಲ್ಲಿ ಕಾಂಗ್ರೆಸ್‌ ಹಾಗೂ ವಿಪಕ್ಷಗಳು ಮಾಡಿದ ಟೀಕೆಗಳಿಗೆ ನರೇಂದ್ರ ಮೋದಿ ಅವರು ಕೊನೆಯಲ್ಲಿ ಒಂದೂವರೆ ತಾಸು ಮಾಡಿದ ಭಾಷಣದಲ್ಲಿ ಪ್ರತಿ ಟೀಕೆಗೂ ಎಳೆ ಎಳೆಯಾಗಿ ಉತ್ತರ ನೀಡಿದರು. 325 ಮತ ಪಡೆದ ಎನ್‌ಡಿಎ 199 ಮತಗಳ ಅಂತರದಲ್ಲಿ ಅವಿಶ್ವಾಸ ನಿರ್ಣಯದ ವಿರುದ್ಧ ಗೆಲುವು ಸಾಧಿಸಿತು.

‘ಏಳಿ, ಬೇಗ ಎದ್ದೇಳಿ’
ರಾಹುಲ್‌ ಗಾಂಧಿ ಅವರು ಮೋದಿ ಅವರ ಬಳಿ ಬಂದು ‘ಏಳಿ, ಬೇಗ ಎದ್ದೇಳಿ’ ಎಂದು ಕೇಳಿಕೊಂಡ ಮಾತಿಗೆ ನರೇಂದ್ರ ಮೋದಿ, ‘ವಿಶ್ವಾಸ ಮೇಲಿನ ಮತದಾನ ಇನ್ನೂ ಮುಗಿದಿಲ್ಲ. ಬೆಳಿಗ್ಗೆ, ಮಾತನಾಡಿದ ಸದಸ್ಯರಾದ ರಾಹುಲ್‌ ನನ್ನನ್ನು ತಬ್ಬಿಕೊಳ್ಳಲು ಬಂದರು. ಆಗ, ‘ಏಳಿ, ಬೇಗ ಎದ್ದೇಳಿ’ ಎಂದು ಅವಸರ ಮಾಡಿದರು. ನನ್ನನ್ನು ಪ್ರಧಾನಿ ಕುರ್ಚಿಯಿಂದ ಎಬ್ಬಿಸಲು ಅವರು ಅತ್ಯಂತ ಅವಸರದಲ್ಲಿದ್ದಂತೆ ಕಾಣುತ್ತದೆ’ ಎಂದು ನಗುತ್ತಲೇ ರಾಹುಲ್‌ ಅವರನ್ನು ಛೇಡಿಸಿ, ‘ದೇಶದ ಜನರು ಚುನಾಯಿಸಿ ಇಲ್ಲಿ ಕೂರಿಸಿದ್ದಾರೆ. ಇಲ್ಲಿಂದ ಎದ್ದೇಳಿಸಲು ನಿಮ್ಮಿಂದಾಗದು' ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ಗೆ ಯಾರ ಮೇಲೂ ವಿಶ್ವಾಸವಿಲ್ಲ  
‘ಮೋದಿ ಹಠಾವೋ, ದೇಶ್‌ ಭಚಾವೋ’ ಎನ್ನುವ ಕಾಂಗ್ರೆಸ್‌ಗೆ ದೇಶದ ಜನರರು ಸೇರಿದಂತೆ ಯಾವುದರ ಮೇಲೂ ವಿಶ್ವಾಸವಿಲ್ಲ’ ಎಂದು ಪ್ರತ್ಯುತ್ತರ ನೀಡಿದರು. ಕಾಂಗ್ರೆಸ್‌ಗೆ ಯಾವೆಲ್ಲಾ ವಿಷಯಗಳ ಮೇಲೆ ಅವಿಶ್ವಾಸವಿದೆ ಎಂಬುದರ ಪಟ್ಟಿಯನ್ನೂ ಮಾಡಿದರು. ಆ ಪಟ್ಟಿ ಇಲ್ಲಿದೆ: 

* ವಿಪಕ್ಷ ಕಾಂಗ್ರೆಸ್‌ ಎಲ್ಲಾ ವಿಷಯದಲ್ಲಿ ನಕಾರಾತ್ಮಕ ರಾಜನೀತಿ ಮಾಡುತ್ತಿದೆ. ಅವರಲ್ಲಿ ಆತ್ಮವಿಶ್ವಾಸವಿಲ್ಲ. 

* ಬಿಜೆಪಿಗೆ ಬಹುಮತ ನೀಡಿರುವ ದೇಶದ 125 ಕೋಟಿ ಜನರ ಮೇಲೂ ಕಾಂಗ್ರೆಸ್‌ಗೆ ವಿಶ್ವಾಸವಿಲ್ಲ. ಈ ಎಲ್ಲಾ ಸಂಗತಿಗಳನ್ನು ಇಡೀ ದೇಶ ನೋಡುತ್ತಿದೆ.

* ಚುನಾವಣಾ ಆಯೋಗದ ಮೇಲೂ ವಿಶ್ವಾಸವಿಲ್ಲ.

* ವಿದ್ಯುನ್ಮಾನ ಮತಯಂತ್ರದ(ಇವಿಎಂ) ಮೇಲೂ ವಿಶ್ವಾಸವಿಲ್ಲ.

* ನ್ಯಾಯಾಂಗ ವ್ಯವಸ್ಥೇ ಮೇಲೂ ವಿಶ್ವಾಸವಿಲ್ಲ.

* ಭಾರತೀಯರ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮೇಲೂ ವಿಶ್ವಾಸವಿಲ್ಲ.

* ಅಂತರರಾಷ್ಟ್ರೀಯ ಸಂಸ್ಥೆಗಳ ಮೇಲೂ ವಿಶ್ವಾಸವಿಲ್ಲ.

* ದೇಶದ ಸೇನೆ ನೆಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಮೇಲೂ ಕಾಂಗ್ರೆಸ್‌ಗೆ ವಿಶ್ವಾಸ ವಿಲ್ಲ. –ಇವೆಲ್ಲವೂ ಅವರಿಗೆ ಯಾವುದರ ಮೇಲೂ ವಿವಶ್ವಾವಿಲ್ಲ ಎಂಬುದನ್ನು ತೋರುತ್ತದೆ ಎಂದು ಮೋದಿ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !