ಸರ್‌ಪಂಚ್‍ಗೆ ನೆಲದಲ್ಲಿ ಕುಳಿತುಕೊಳ್ಳಲು ಹೇಳಿದ ಕಾಂಗ್ರೆಸ್ ಶಾಸಕಿ!

ಬುಧವಾರ, ಏಪ್ರಿಲ್ 24, 2019
32 °C

ಸರ್‌ಪಂಚ್‍ಗೆ ನೆಲದಲ್ಲಿ ಕುಳಿತುಕೊಳ್ಳಲು ಹೇಳಿದ ಕಾಂಗ್ರೆಸ್ ಶಾಸಕಿ!

Published:
Updated:

ಜೈಪುರ್: ವೇದಿಕೆ ಮೇಲೆ ಕುಳಿತುಕೊಳ್ಳಲು ಬಂದ ರಾಜಸ್ಥಾನದ ಸರ್‌ಪಂಚ್‍ನ್ನು ನೆಲದಲ್ಲಿ ಕುಳಿತುಕೊಳ್ಳುವಂತೆ ಹೇಳಿದ ಕಾಂಗ್ರೆಸ್ ಶಾಸಕಿ ಮೇಲೆ ರಾಜಸ್ಥಾನದ ಸರ್‌ಪಂಚ್ ಸಂಘ ಆಕ್ರೋಶ ವ್ಯಕ್ತ ಪಡಿಸಿದೆ.

ಕಾಂಗ್ರೆಸ್ ಶಾಸಕಿ ದಿವ್ಯಾ ಮೆದೇರ್ನಾ ಸಭೆ ನಡೆಸುತ್ತಿರುವಾಗ ಜೋಧಪುರ್ ಜಿಲ್ಲೆಯ ಒಸಿಯಾನ್ ಪ್ರದೇಶದ ಖೆಸ್ತಾರ್ ಗ್ರಾಮದ ಸರ್‌ಪಂಚ್ ಚಂದೂ ದೇವಿ ವೇದಿಕೆಯಲ್ಲಿ ಆಸೀನರಾಗಲು ಅಣಿಯಾದಾಗ, ಹೋಗಿ ನೆಲದಲ್ಲಿ ಕುಳಿತುಕೊಳ್ಳುವಂತೆ ದಿವ್ಯಾ ಹೇಳಿದ್ದಾರೆ.

ನಮ್ಮ  ಮಹಿಳಾ ಸರ್‌ಪಂಚ್ ಅವರನ್ನು ಅವಮಾನಿಸಿದ್ದಕ್ಕಾಗಿ  ದಿವ್ಯಾ ಕ್ಷಮೆ ಯಾಚಿಸಬೇಕು. ಆಕೆ ಕ್ಷಮೆ ಯಾಚಿಸದೇ ಇದ್ದರೆ ನಮ್ಮ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರಾಜಸ್ಥಾನ ಸರ್‌ಪಂಚ್ ಸಂಘದ ಅಧ್ಯಕ್ಷ  ಭನ್ವರ್‌ಲಾಲ್ ಹೇಳಿದ್ದಾರೆ.

ಮಹಿಳೆಯೊಬ್ಬರಿಂದ ಈ ರೀತಿಯ ವರ್ತನೆ ನಾನು ನಿರೀಕ್ಷಿಸಿರಲಿಲ್ಲ ಎಂದು ಚಂದೂ ದೇವಿ ಹೇಳಿದ್ದಾರೆ.ಮೆದೇರ್ನಾ ಅವರ ವರ್ತನೆ ನೋಡಿ ನನಗೆ ಬೇಸರವಾಗಿದೆ, ನಮ್ಮ ಗ್ರಾಮದವರ ಪರವಾಗಿ ನಾನು ಆ ಸಭೆಗೆ ಹೋಗಿದ್ದೆ. ಹಾಗಾಗಿ ನಾನು ಶಾಸಕಿಯ ಪಕ್ಕ ವೇದಿಕೆಯಲ್ಲಿ ಕುಳಿತುಕೊಳ್ಳಲು ಹೋದೆ ಎಂದಿದ್ದಾರೆ ದೇವಿ.

ಮೆದೇರ್ನಾ ಏನಂತಾರೆ?
ಸರ್‌ಪಂಚ್ ಬಿಜೆಪಿಗೆ ಸೇರಿದವರಾಗಿದ್ದಾರೆ. ಕಾಂಗ್ರೆಸ್‍ಗೆ ಮತ ನೀಡಿ ಶಾಸಕಿಯನ್ನಾಗಿ ಮಾಡಿದ್ದಕ್ಕಾಗಿ ಮತದಾರರರಿಗೆ ಧನ್ಯವಾದ ಹೇಳುವುದಕ್ಕಾಗಿ ನಾನು ಸಭೆ ಕರೆದಿದ್ದೆ. ಹೀಗಿರುವಾಗ ಆಕೆಯನ್ನು ವೇದಿಕೆಯಲ್ಲಿ ಹೇಗೆ ಕುಳಿತುಕೊಳ್ಳಲು ಹೇಳಲಿ? ಎಂದಿದ್ದಾರೆ.

ಆದಾಗ್ಯೂ, ಶಾಸಕಿ ವಿರುದ್ಧ ಟೀಕಾ ಪ್ರಹಾರಗಳಾಗುತ್ತಿದ್ದಂತೆ ಮಾತಿನ ದಾಟಿ ಬದಲಿಸಿದ ಮೆದೇರ್ನಾ, ನನಗೆ ಅವರು ಸರ್‌ಪಂಚ್ ಎಂದು ಗೊತ್ತಿರಲಿಲ್ಲ. ಅವರು ಸೆರಗಿನಿಂದ ಮುಖ ಮುಚ್ಚಿಕೊಂಡಿದ್ದರಿಂದ ಯಾರು ಎಂದು ತಿಳಿಯಲಿಲ್ಲ. ಏನೂ ಸಮಸ್ಯೆ ಹೇಳಲು ಬಂದ ಗ್ರಾಮದ ಮಹಿಳೆ ಅವರಾಗಿರಬಹುದು ಎಂದು ವೇದಿಕೆಯಲ್ಲಿ ಕುಳಿತುಕೊಳ್ಳಬೇಡಿ ಎಂದು ಹೇಳಿದೆ ಅಂದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 2

  Frustrated
 • 21

  Angry

Comments:

0 comments

Write the first review for this !