ಶನಿವಾರ, ಡಿಸೆಂಬರ್ 7, 2019
16 °C

ಮಹಾರಾಷ್ಟ್ರ ಸ್ಪೀಕರ್‌ ಆಗಿ ನಾನಾ ಪಟೋಲೆ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದ ನಾನಾ ಪಟೋಲೆ ಅವರು ಮಹಾರಾಷ್ಟ್ರದ ಸ್ಪೀಕರ್‌ ಆಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಕಿಸಾನ್‌ ಕಠೋರೆ ನಾಮನಿರ್ದೇಶನಗೊಂಡಿದ್ದರು. ಆದರೆ, ಭಾನುವಾ ಬೆಳಿಕ್ಕೆ ಪಕ್ಷ ತನ್ನ ಅಭ್ಯರ್ಥಿಯನ್ನು ಹಿಂಪಡೆದಿದ್ದರಿಂದ ಪಟೋಲೆ ಅವಿರೋಧವಾಗಿ ಆಯ್ಕೆಯಾದರು.

 

‘ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯೂ ತನ್ನ ಅಭ್ಯರ್ಥಿಯನ್ನು ಘೋಷಿಸಿತ್ತು. ಬೇರೆ ಶಾಸಕರ ಮನವಿ ಮೇರೆಗೆ ಹಾಗೂ ಶಾಸನ ಸಭೆಯ ಗೌರವನ್ನು ಕಾಪಾಡುವ ದೃಷ್ಟಿಯಿಂದ ತನ್ನ ಅಭ್ಯರ್ಥಿಯನ್ನು ಹಿಂಪಡೆದಿದೆ. ಈಗ ಸ್ಪೀಕರ್‌ ಆಯ್ಕೆ ಅವಿರೋಧವಾಗಿ ನಡೆಯುತ್ತದೆ’ ಎಂದು ಎನ್‌ಸಿಪಿ ಮುಖಂಡ ಚಗನ್‌ ಭುಜಬಲ್‌ ತಿಳಿಸಿದರು.

ಮಹಾರಾಷ್ಟ್ರ ಪೂರ್ವಭಾಗದ ವಿದರ್ಭಾ ಪ್ರದೇಶದವರಾದ 56 ವರ್ಷದ ಪಟೋಲೆ ಹಿಂದುಳಿದ ಕುಣಬಿ ಸಮುದಾಯದ  ಕೃಷಿ ಕುಟುಂಬದಿಂದ ಬಂದವರು. ಪಕ್ಷೇತರರಾಗಿದ್ದ ಅವರು 2014ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದರು. ಆ ಚುನಾವಣೆಯಲ್ಲಿ ಭಂಡಾರ-ಗೋಂಡಿಯಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್​ನಲ್ಲಿ ಸ್ಪರ್ಧಿಸಿದ್ದ ಅವರು ಎನ್‌ಸಿಪಿಯ ಪ್ರಫುಲ್ ಪಟೇಲ್ ಅವರನ್ನ ಸೋಲಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು