ಶನಿವಾರ, ಆಗಸ್ಟ್ 24, 2019
23 °C

ಕಾಂಗ್ರೆಸ್‌ಗೆ ಇಕ್ಕಟ್ಟು

Published:
Updated:

ನವದೆಹಲಿ: 370ನೇ ವಿಧಿಯನ್ನು ಅಸಿಂಧುಗೊಳಿಸುವ ಕೇಂದ್ರ ಸರ್ಕಾರದ ನಡೆಯು ಕಾಂಗ್ರೆಸ್‌ ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ಜಮ್ಮು ಕಾಶ್ಮೀರ ಕುರಿತ ನಿರ್ಣಯಗಳನ್ನು ಮತಕ್ಕೆ ಹಾಕುವುದಕ್ಕೂ ಕೆಲವೇ ನಿಮಿಷಗಳ ಹಿಂದೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕ ಭುವನೇಶ್ವರ್‌ ಕಲಿತ ಅವರು ಪಕ್ಷದ ನಿಲುವು ವಿರೋಧಿಸಿ ಕಾಂಗ್ರೆಸ್‌ ಸದಸ್ಯತ್ವಕ್ಕೆ ಮತ್ತು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. ‘ದೇಶ ಒಗ್ಗೂಡಿಸುವ ಮತ್ತು ಜಮ್ಮು ಕಾಶ್ಮೀರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಲ್ಲ ಕೇಂದ್ರದ ಈ ತೀರ್ಮಾನ ಶ್ಲಾಘಿಸಿ ಇಡೀ ದೇಶ ಅವರಿಗೆ ಬೆಂಬಲ ನೀಡುತ್ತಿದೆ’ ಎಂದು ಕಲಿತ ವಾದಿಸಿದ್ದಾರೆ.

Post Comments (+)