ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌: 18 ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ

Last Updated 16 ಮಾರ್ಚ್ 2019, 1:24 IST
ಅಕ್ಷರ ಗಾತ್ರ

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 18 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ್ದು, ಹಾಲಿ ಸಂಸದರು, ಮಾಜಿ ಸಚಿವರು ಸೇರಿ ಪ್ರಮುಖರ ಹೆಸರು ಈ ಪಟ್ಟಿಯಲ್ಲಿದೆ.

ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆಯ ನಂತರ ಕಾಂಗ್ರೆಸ್‌ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ ಮೇಘಾಲಯದ ತುರಾ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮುಖುಲ್‌ ಸಂಗ್ಮಾ ಅವರನ್ನು ಕಣಕ್ಕೆ ಇಳಿಸಲಾಗಿದೆ. ಉಳಿದಂತೆ ಅಸ್ಸಾಂನಲ್ಲಿ ಐವರು, ಮೇಘಾಲಯದಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ ಒಬ್ಬರು, ಸಿಕ್ಕಿಂ ಮತ್ತು ನಾಗಾಲೆಂಡ್‌ನಲ್ಲಿ ತಲಾ ಒಬ್ಬರು, ತೆಲಾಂಗಾಣದಲ್ಲಿ ಎಂಟು ಮಂದಿ ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ.

ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರದಿಂದ ಅಕಿಲ ಭಾರತ ಮಹಿಳಾ ಕಾಂಗ್ರೆಸ್‌ ಮುಖ್ಯಸ್ಥೆ ಸುಷ್ಮಿತಾ ದೇವ್‌ ಹಾಗೂ ಕಲಿಯಾಬೊರ್‌ ಕ್ಷೇತ್ರದಿಂದ ಗೌರವ್‌ ಗೊಗೊಯ್‌ ಸ್ಪರ್ಧಿಸಲಿದ್ದಾರೆ. ಈ ಇಬ್ಬರು ಹಾಲಿ ಸಂಸದರು. ಶಿಲಾಂಗ್‌ನಿಂದ ಮಾಜಿ ಕೇಂದ್ರ ಸಚಿವ, ಸಂಸದ ವಿನ್ಸೆಟ್‌ ಪಾಲಾ, ದಿಬ್ರುಗರ್‌ನಿಂದ ಪಬನ್‌ ಸಿಂಗ್ ಘಟೊವರ್ ಅವರನ್ನು ಆಯ್ಕೆ ಮಾಡಲಾಗಿದೆ.

ಉತ್ತರ ಪ್ರದೇಶದ ಮೀಸಲಾತಿ ಕ್ಷೇತ್ರ ಬಾರಾಬಂಕಿಯಿಂದ ಹಿರಿಯ ದಲಿತ ಮುಖಂಡ ಪಿ.ಎಲ್. ಪುನಿಯಾ ಅವರ ಮಗ ತನುಜ ಪುನಿಯಾ ಅವರನ್ನು ಕಣಕ್ಕಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT