ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಡಬ್ಲ್ಯುನಿಂದ ಮಿನಿ ಕಂಟ್ರಿಮ್ಯಾನ್

Last Updated 3 ಮೇ 2018, 19:18 IST
ಅಕ್ಷರ ಗಾತ್ರ

ನವದೆಹಲಿ‌: ಐಷಾರಾಮಿ ಕಾರು ತಯಾರಿಸುವ ಬಿಎಂಡಬ್ಲ್ಯು, ಭಾರತದಲ್ಲಿ ತನ್ನ ‘ಮಿನಿ’ ಬ್ರ್ಯಾಂಡ್‌ ಮಾರಾಟವನ್ನು ದ್ವಿಗುಣಗೊಳಿಸಲು ಸಜ್ಜಾಗಿದೆ.

ಈ ನಿಟ್ಟಿನಲ್ಲಿ ಸ್ಥಳೀಯವಾಗಿಯೇ ಬಿಡಿಭಾಗಗಳ ಜೋಡಣೆ ಆರಂಭಿಸಿದ್ದು, ಸ್ಥಳೀಯವಾಗಿ ಜೋಡಿಸಿದ ಹೊಸ ‘ಮಿನಿ ಕಂಟ್ರಿಮ್ಯಾನ್‌’ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 34.9 ಲಕ್ಷದಿಂದ ₹ 41.4 ಲಕ್ಷದವರೆಗೆ ಇದೆ.

ಪೆಟ್ರೋಲ್ ಮತ್ತು ಡೀಸೆಲ್‌ ಎಂಜಿನ್‌ಗಳಲ್ಲಿ ಲಭ್ಯವಿದೆ. ಮುಂದಿನ ತಿಂಗಳಿನಿಂದ ವಿತರಣೆ ಆರಂಭವಾಗಲಿದೆ.

‘ಎರಡನೇ ತಲೆಮಾರಿನ ಮಿನಿ ಕಂಟ್ರಿಮ್ಯಾನ್‌ ಚೆನ್ನೈನಲ್ಲಿರುವ ಘಟಕದಲ್ಲಿ ಸಿದ್ಧಪಡಿಸಲಾಗಿದೆ. ಇದು ಭಾರತದಲ್ಲಿ ಬಿಎಂಡಬ್ಲ್ಯುನ ಹೊಸ ಅಧ್ಯಾಯವನ್ನು ಬರೆಯಲಿದೆ’ ಎಂದು ಬಿಎಂಡಬ್ಲ್ಯು ಗ್ರೂಪ್‌ನ ಇಂಡಿಯಾದ ಅಧ್ಯಕ್ಷ ವಿಕ್ರಂ ಪವ್ಹಾ ತಿಳಿಸಿದ್ದಾರೆ.

‘ಹಿಂದಿನ ವರ್ಷ ಮಿನಿ ಬ್ರ್ಯಾಂಡ್‌ನ 421 ವಾಹನಗಳು ಮಾರಾಟವಾಗಿದ್ದು, ಶೇ 17 ರಷ್ಟು ಪ್ರಗತಿ ಕಂಡಿದೆ. 2018ರ ಜನವರಿ–ಮಾರ್ಚ್‌ ಅವಧಿಯಲ್ಲಿ 136 ವಾಹನಗಳನ್ನು ಮಾರಿದ್ದು ಶೇ 15 ರಷ್ಟು ಪ್ರಗತಿ ಸಾಧ್ಯವಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT