ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿನಂದನ್‌ ‘ಮೀಸೆ’ ಚರ್ಚೆ

Last Updated 24 ಜೂನ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ:ವಾಯುಪಡೆ ಅಧಿಕಾರಿ ಅಭಿನಂದನ್ ವರ್ಧಮಾನ್ ಅವರ ಮೀಸೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಯಿತು. ವಿಶೇಷ ವಿನ್ಯಾಸದ ಅವರ ಮೀಸೆಗೆ ‘ರಾಷ್ಟ್ರೀಯ ಮೀಸೆ’ಯ ಸ್ಥಾನಮಾನ ನೀಡುಬೇಕು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಆಗ್ರಹಿಸಿದರು.

‘ಅಭಿನಂದನ್‌ಗೆ ಭಾರತ್ ಶ್ರೀ ಪ್ರಶಸ್ತಿ ನೀಡಬೇಕು, ಅವರ ಮೀಸೆಗೆ ರಾಷ್ಟ್ರೀಯ ಮಾನ್ಯತೆ ನೀಡಬೇಕು’ ಎಂದರು. ಬಾಲಾಕೋಟ್ ದಾಳಿ ಕುರಿತು ಪ್ರಸ್ತಾಪಿಸುವಾಗಿ ಮೀಸೆ ವಿಷಯವೂ ಚರ್ಚೆಗೆ ಬಂದಿತು.

ಇದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕರೂ ಅಭಿನಂದನ್ ಮೀಸೆಯ ವಿನ್ಯಾಸವನ್ನು ಅನುಸರಿಸುವ ಸಾಧ್ಯತೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT