ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಸೀದಿ ಇದ್ದ ಮಾತ್ರಕ್ಕೆ ರಾಮಜನ್ಮಭೂಮಿ ಮಹತ್ವ ಕುಗ್ಗದು’

Last Updated 13 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಮಜನ್ಮಭೂಮಿಯು ಕೆಲವರ ನಂಬಿಕೆಯಿಂದಾಗಿ ಪೂಜಾಸ್ಥಳವಾಗಿದೆ. ಅಲ್ಲಿ ಮಸೀದಿ ಇತ್ತು ಎಂಬ ಕಾರಣದಿಂದಾಗಿ ಅದರ ಸ್ಥಾನಮಾನ ಕುಗ್ಗುವುದಿಲ್ಲ ಎಂದು ರಾಮಲಲ್ಲಾ ಮಂಗಳವಾರ ಸುಪ್ರೀಂ ಕೋರ್ಟ್‌ ಎದುರು ಪ್ರತಿಪಾದಿಸಿದೆ.

ರಾಮಮಂದಿರ–ಬಾಬರಿ ಮಸೀದಿ ಸಂಬಂಧ ಆಯೋಧ್ಯೆ ಪ್ರಕರಣದಲ್ಲಿ ರಾಮಲಲ್ಲಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಸ್‌.ವೈದ್ಯನಾಥನ್‌, ‘ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬರುವ ಯಾರಾ ದರೂ ರಾಮಜನ್ಮಭೂಮಿಯ ಹಕ್ಕು ಪ್ರತಿಪಾದಿಸಲು ಬರುವುದಿಲ್ಲ. ಆ ಸ್ಥಳವನ್ನು ವಿಭಜಿಸಲಾಗದು’ ಎಂದು ಪ್ರತಿಪಾದಿಸಿದರು.

ಕೆಲವರ ನಂಬಿಕೆಯಿಂದಾಗಿ ರಾಮ ಜನ್ಮಭೂಮಿಯು ಪೂಜಾಸ್ಥಳವಾಗಿದೆ. ಮೂರು ಗೋಪುರದ ಬಾಬರಿ ಮಸೀದಿಯು 1,500ರಲ್ಲಿ ಬಂದಿದ್ದು ಇದು, ಹಿಂದೂಗಳ ನಂಬಿಕೆ ಅಥವಾ ಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ಆಗಿಲ್ಲ. ಹಿಂದೂಗಳ ನಂಬಿಕೆಯ ಹಕ್ಕನ್ನು ಕಸಿದುಕೊಳ್ಳಲಾಗದು’ ಎಂದು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT