ಲಖನೌದಲ್ಲಿ ಮಸೀದಿ, ಡಿಸೆಂಬರ್‌ನಲ್ಲಿ ರಾಮಮಂದಿರ ನಿರ್ಮಾಣ: ರಾಮಜನ್ಮಭೂಮಿ ನ್ಯಾಸ್

7

ಲಖನೌದಲ್ಲಿ ಮಸೀದಿ, ಡಿಸೆಂಬರ್‌ನಲ್ಲಿ ರಾಮಮಂದಿರ ನಿರ್ಮಾಣ: ರಾಮಜನ್ಮಭೂಮಿ ನ್ಯಾಸ್

Published:
Updated:

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ ಎಂದು ರಾಮಜನ್ಮಭೂಮಿ ನ್ಯಾಸ್ ಅಧ್ಯಕ್ಷ  ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ.

ರಾಮಜನ್ಮಭೂಮಿ ವಿವಾದದಲ್ಲಿ ವಾದಿಸುತ್ತಿರುವ ಎರಡು ಗುಂಪಿನ ಜನರ ಸಮ್ಮತಿಯಿಂದಲೇ ರಾಮಮಂದಿರ ನಿರ್ಮಾಣ ನಡೆಯಲಿದೆ. ಅದೇ ವೇಳೆ ಲಖನೌದಲ್ಲಿ ಮಸೀದಿಯನ್ನೂ ನಿರ್ಮಿಸಲಾಗುವುದು. ದೇವಾಲಯ ಮತ್ತು ಮಸೀದಿಯ ನಿರ್ಮಾಣಕ್ಕೆ ಸುಗ್ರೀವಾಜ್ಞೆಯ ಅಗತ್ಯವಿಲ್ಲ ಎಂದು ಬಿಜೆಪಿಯ ಮಾಜಿ ಸಂಸದ ವೇದಾಂತಿ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣ ಕಾರ್ಯಗಳು ಮತ್ತಷ್ಟು ವಿಳಂಬವಾದರೆ 1992ರಲ್ಲಿ ನಡೆದ ಜನಾಂದೋಲನದಂತೆ ಮತ್ತೊಂದು ಜನಾದೋಲನ ನಡೆಸಲಾಗುವುದು ಎಂದು  ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ ಹೇಳಿದ್ದರು.

ಇದನ್ನೂ ಓದಿ 

ರಾಮ ಮಂದಿರಕ್ಕಾಗಿ ಭಾರಿ ಜನಾಂದೋಲನ: ಸುಳಿವು ನೀಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !