ವಿದ್ಯಾರ್ಥಿ ದೃಷ್ಟಿಹೀನತೆಗೆ ಕಾರಣವಾಗಿದ್ದ ಹೊಡೆತ: ಹೊಸಪೇಟೆ ಶಿಕ್ಷಕನಿಗೆ ಜೈಲು

7

ವಿದ್ಯಾರ್ಥಿ ದೃಷ್ಟಿಹೀನತೆಗೆ ಕಾರಣವಾಗಿದ್ದ ಹೊಡೆತ: ಹೊಸಪೇಟೆ ಶಿಕ್ಷಕನಿಗೆ ಜೈಲು

Published:
Updated:

ನವದೆಹಲಿ: ಶಾಲೆಗೆ ಶೂ ಧರಿಸದೆ ಬಂದಿದ್ದಕ್ಕಾಗಿ ಬೆತ್ತದಿಂದ ಹೊಡೆದು ವಿದ್ಯಾರ್ಥಿಯೊಬ್ಬನ ದೃಷ್ಟಿಹೀನತೆಗೆ ಕಾರಣವಾಗಿದ್ದ ಹೊಸಪೇಟೆಯ ರಾಣಿ ಚೆನ್ನಮ್ಮ ಶಾಲೆಯ ಶಿಕ್ಷಕರೊಬ್ಬರಿಗೆ ಸುಪ್ರೀಂ ಕೋರ್ಟ್‌ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

‘2ನೇ ತರಗತಿಯ ವಿದ್ಯಾರ್ಥಿಯ ಎಡಗಣ್ಣಿಗೆ ಬೆತ್ತದಿಂದ ಹೊಡೆದು ದೃಷ್ಟಿಹೀನತೆಗೆ ಶಿಕ್ಷಕನೇ ಕಾರಣವಾಗಿರುವುದು ದುರದೃಷ್ಟಕರ ಪ್ರಕರಣ’ ಎಂದು ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಆರ್‌.ಭಾನುಮತಿ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

1996ರಲ್ಲಿ ನಡೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಆರ್. ಕರಿಯಪ್ಪ ಶಿಕ್ಷೆಗೊಳಗಾದವರು. ದಂಡದ ಮೊತ್ತ ₹ 50 ಸಾವಿರವನ್ನು ವಿದ್ಯಾರ್ಥಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ಕೋರ್ಟ್ ಸೂಚಿಸಿದೆ. ನಾಲ್ಕು ವಾರದೊಳಗೆ ಶರಣಾಗುವಂತೆ ನ್ಯಾಯಪೀಠ ಶಿಕ್ಷಕನಿಗೆ ಸೂಚಿಸಿದೆ.

 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !