ಕಾಶ್ಮೀರ: ಉಗ್ರರಿಂದ ಪೊಲೀಸ್ ಕಾನ್‌ಸ್ಟೆಬಲ್ ಅಪಹರಣ, ಹತ್ಯೆ

7

ಕಾಶ್ಮೀರ: ಉಗ್ರರಿಂದ ಪೊಲೀಸ್ ಕಾನ್‌ಸ್ಟೆಬಲ್ ಅಪಹರಣ, ಹತ್ಯೆ

Published:
Updated:
ಜಾವಿದ್ ಅಹಮದ್ ದರ್

ಶ್ರೀನಗರ: ಕಣಿವೆ ರಾಜ್ಯದಲ್ಲಿ ಮತ್ತೊಬ್ಬ ಭದ್ರತಾ ಸಿಬ್ಬಂದಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಈದ್ ಹಬ್ಬಕ್ಕೆ ಮನೆಗೆ ಬರುತ್ತಿದ್ದ ಸೈನಿಕ ಔರಂಗಾಜೇಬ್ ಅವರ ಅಪಹರಣ ಮತ್ತು ಕೊಲೆಯ ಪ್ರಕರಣ ಜನಮಾನಸದಿಂದ ಮಾಸುವ ಮೊದಲೇ ಅಂಥ ಮತ್ತೊಂದು ಘಟನೆ ನಡೆದಿರುವುದು ದೇಶದ ಗಮನ ಸೆಳೆದಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್ ಜಾವಿದ್ ಅಹಮದ್ ದರ್ (27) ಮೃತರು. ಅವರನ್ನು ಗುರುವಾರ ರಾತ್ರಿ 9.30ಕ್ಕೆ ಸ್ವಗ್ರಾಮ ವೆಹಿಲ್ ಚಟ್ವಾಟನ್‌ನಲ್ಲಿರುವ ಅವರ ಮನೆಯ ಸಮೀಪದ ಮೆಡಿಕಲ್ ಸ್ಟೋರ್‌ಗೆ ಹೋಗಿದ್ದಾಗ ಬಂದೂಕು ತೋರಿಸಿ ಅಪಹರಿಸಲಾಗಿತ್ತು. ಈ ವೇಳೆ ಅವರು ಕರ್ತವ್ಯದ ಮೇಲೆ ಇರಲಿಲ್ಲ.

ಜಾವಿದ್ ಅವರ ಮೃತದೇಹವು ಪರಿವಾನ್ ಕುಲ್ಗಾಮ್ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಈ ವಿಷಯವನ್ನು ಇನ್ನೂ ದೃಢಪಡಿಸಬೇಕಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಜಾವಿದ್ ಅವರು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಾಲಿಂದರ್ ಮಿಶ್ರಾ ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿಯ ತಂಡದಲ್ಲಿ ಇದ್ದರು.

ಗುರುವಾರ ಸಂಜೆ ಜಾವಿದ್ ಅವರ ಅಪಹರಣ ವರದಿಯಾದ ನಂತರ ಅಂಗಿ ಧರಿಸದ ವ್ಯಕ್ತಿಯೊಬ್ಬರ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಚಿತ್ರವನ್ನು ದುಷ್ಕರ್ಮಿಗಳೇ ತೆಗೆದಿದ್ದಾರೆ ಮತ್ತು ಚಿತ್ರದಲ್ಲಿರುವುದು ಜಾವಿದ್ ಎಂದು ಹಲವು ಅಭಿಪ್ರಾಯಪಟ್ಟಿದ್ದರು.

ಇಮಾಮ್‌ಗೆ ಗುಂಡು:

ಪುಲ್ವಾಮ ಜಿಲ್ಲೆಯ ಪರಿಗಾಂ ಗ್ರಾಮದ ಇಮಾಮ್ ಮೊಹಮದ್ ಅಶ್ರಾಫ್ ಅವರ ಮೇಲೆ ಉಗ್ರಗಾಮಿಗಳು ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಅಶ್ರಾಫ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಭದ್ರತಾಪಡೆಯ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 3

  Frustrated
 • 0

  Angry

Comments:

0 comments

Write the first review for this !