ಶವಗಳ ಮೇಲೆ ಕಾಲಿಟ್ಟ ಕಾನ್‌ಸ್ಟೆಬಲ್‌

7

ಶವಗಳ ಮೇಲೆ ಕಾಲಿಟ್ಟ ಕಾನ್‌ಸ್ಟೆಬಲ್‌

Published:
Updated:

ಲಖನೌ: ಪೊಲೀಸ್‌ ವಾಹನದಲ್ಲಿ ಇರಿಸಿದ್ದ ಶವಗಳ ಮೇಲೆ ಕಾನ್‌ಸ್ಟೆಬಲ್‌ ಒಬ್ಬರು ತಮ್ಮ ಕಾಲುಗಳನ್ನು ಇರಿಸಿಕೊಂಡು ಕುಳಿತಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಸಂಬಂಧ ಅವರನ್ನು ಅಮಾನತು ಮಾಡಲಾಗಿದೆ.

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಚಂದುಪುರ ಗ್ರಾಮದಲ್ಲಿ ವಿವಾದವಿದ್ದ ಜಮೀನಿನಲ್ಲಿ ಇಟ್ಟಿಗೆಗಳನ್ನು ಹಾಕಿದ್ದಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು ಇಬ್ಬರು ಮೃತಪಟ್ಟಿದ್ದರು.

ವಿಷಯ ತಿಳಿದ ಸರಾಯ್‌ ಅಕಿಲ್‌ ಪೊಲೀಸ್‌ ಠಾಣೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು.

ಈ ವೇಳೆ ಕಾನ್‌ಸ್ಟೆಬಲ್‌ ಶವಗಳನ್ನು ವಾಹನದಲ್ಲಿರಿಸಿ, ಅವುಗಳ ಮೇಲೆ ಕಾಲಿಟ್ಟು ಕುಳಿತಿದ್ದರು ಎನ್ನಲಾಗಿದೆ. ರಾಜ್ಯದಲ್ಲಿ ಪೊಲೀಸರು ಸಂವೇದನಾರಹಿತರಾಗಿ ವರ್ತಿಸಿದ್ದು ಇದೇ ಮೊದಲಲ್ಲ. ಕೆಲ ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯ
ಗೊಂಡಿದ್ದ ಯುವಕನನ್ನು ಪೊಲೀಸ್‌ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸರು ನಿರಾಕರಿಸಿದ್ದು ಸುದ್ದಿಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !