ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Coronavirus Update| ದೇಶದಲ್ಲಿ ಸೋಂಕಿತರ ಸಂಖ್ಯೆ 206ಕ್ಕೆ ಏರಿಕೆ, ಐದು ಸಾವು

Last Updated 20 ಮಾರ್ಚ್ 2020, 6:27 IST
ಅಕ್ಷರ ಗಾತ್ರ

ಕೋಲ್ಕತ/ಜೈಪುರ: ಜಗತ್ತನ್ನು ಆವರಿಸುತ್ತಿರುವ ಕೊರೊನಾ ವೈರಸ್‌ ಸೋಂಕು ಸದ್ಯ ಭಾರತದಲ್ಲೂ ಸಾಂಕ್ರಾಮಿಕಗೊಂಡಿದೆ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದಲ್ಲಿ ಒಂದು, ರಾಜಸ್ಥಾನದಲ್ಲಿ ಎರಡು ಹೊಸ ಪ್ರಕರಣಗಳು ದಾಖಲಾಗಿವೆ.

ಆ ಮೂಲಕ ದೇಶದಲ್ಲಿ ಕೊರೊನಾ ಸೋಂಕು ಕಂಡಬಂದ ಪ್ರಕರಣಗಳ ಸಂಖ್ಯೆ 206ಕ್ಕೆ ಏರಿದ್ದು, ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಜಾಗತಿಕವಾಗಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಮೃತರ ಸಂಖ್ಯೆ 9,020ಕ್ಕೆ ತಲುಪಿದೆ.
ಐರೋಪ್ಯ ರಾಷ್ಟ್ರಗಳಲ್ಲಿ ಅತ್ಯಧಿಕ ಅಂದರೆ 4,134 ಜನರು ಜೀವ ಕಳೆದುಕೊಂಡಿದ್ದರೆ, ಏಷ್ಯಾದ ರಾಷ್ಟ್ರಗಳಲ್ಲಿ 3,416 ಜನರು ಬಲಿಯಾಗಿದ್ದಾರೆ.

ಕರ್ನಾಟಕದಲ್ಲಿ ಇಲ್ಲಿಯವರೆಗೆ ಒಟ್ಟು 15 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

206: ಭಾರತದಲ್ಲಿ ಸದ್ಯ ಕೋವಿಡ್‌ ಸೋಂಕು ದೃಢಪಟ್ಟಿರುವವರ ಸಂಖ್ಯೆ

05: ದೇಶದಲ್ಲಿ ಕೋವಿಡ್‌ ಸೋಂಕಿನಿಂದ ಸತ್ತವರು

-ಕರ್ನಾಟಕ–1
-ದೆಹಲಿ – 1
-ಮಹಾರಾಷ್ಟ್ರ – 1
-ಪಂಜಾಬ್‌– 1
–ರಾಜಸ್ಥಾನ–1

ಕೊರೊನಾ ವೈರಸ್‌ ಸೋಂಕು ದೃಢವಾಗಿರುವ ರಾಜ್ಯಗಳು ಮತ್ತು ಸಂಖ್ಯೆಗಳು

-ಕೇರಳ 27 (ಇಬ್ಬರು ವಿದೇಶಿಯರೂ ಸೇರಿ)
-ಪಂಜಾಬ್‌ – 1
-ದೆಹಲಿ – 10
-ಜಮ್ಮು ಮತ್ತು ಕಾಶ್ಮೀರ –4
-ಲಡಾಕ್‌ – 8
-ರಾಜಸ್ಥಾನ – 6(ಇಬ್ಬರು ವಿದೇಶಿಯರೂ ಸೇರಿ)
-ಉತ್ತರ ಪ್ರದೇಶ – 22(ಒಬ್ಬ ವಿದೇಶಿ ಪ್ರಜೆಯೂ ಸೇರಿ)
-ಮಹಾರಾಷ್ಟ್ರ – 52(ಮೂವರು ವಿದೇಶಿಯರನ್ನೂ ಸೇರಿ) (ದೇಶದಲ್ಲೇ ಅತಿ ಹೆಚ್ಚು ಪ್ರಕರಣ)
-ಕರ್ನಾಟಕ – 14
-ತಮಿಳುನಾಡು – 2
-ತೆಲಂಗಾಣ – 13 (ಇಬ್ಬರು ವಿದೇಶಿಯರೂ ಸೇರಿ)
-ಹರಿಯಾಣ – 16 (14 ಮಂದಿ ವಿದೇಶಿಯರೂ ಸೇರಿ )
-ಆಂಧ್ರಪ್ರದೇಶ – 1
-ಉತ್ತರಾಖಂಡ – 1
-ಒಡಿಶಾ – 1
-ಪಶ್ಚಿಮ ಬಂಗಾಳ – 2
-ಚಂಡೀಗಢ– 1
-ಚತ್ತೀಸಗಢ–1

14: ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT