ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ಒಂದೇ ದಿನ 8909 ಪ್ರಕರಣ, ಲಕ್ಷಕ್ಕೂ ಹೆಚ್ಚು ಜನ ಗುಣಮುಖ

Last Updated 3 ಜೂನ್ 2020, 20:53 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ: ಕೋವಿಡ್‌ ಪ್ರಕರಣಗಳ ಒಂದೇ ದಿನದ ಅತಿ ಹೆಚ್ಚಿನ ಏರಿಕೆಗೆ ಬುಧವಾರ ಸಾಕ್ಷಿಯಾಯಿತು. ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನ 24 ತಾಸುಗಳಲ್ಲಿ 8,909 ಪ್ರಕರಣಗಳು ದೃಢಪಟ್ಟಿವೆ. ಪ್ರಕರಣಗಳ ಒಟ್ಟು ಸಂಖ್ಯೆಯು 2,07,615ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಆದರೆ, ರಾಜ್ಯಗಳು ನೀಡಿದ ಅಂಕಿ ಅಂಶ ಪ್ರಕಾರ, ಪ್ರಕರಣಗಳ ಸಂಖ್ಯೆ 2,13,792.

ಈ 24 ತಾಸು ಅವಧಿಯಲ್ಲಿ 217 ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಸಾವಿನ ಒಟ್ಟು ಸಂಖ್ಯೆ 5,815ಕ್ಕೆ ಹೆಚ್ಚಳವಾಗಿದೆ.

ಇದೇ ಹೊತ್ತಿಗೆ, ಗುಣಮುಖರಾದವರ ಸಂಖ್ಯೆ ಮತ್ತು ಪ್ರಮಾಣದಲ್ಲಿಯೂ ಏರಿಕೆಯಾಗಿದೆ. ಕೋವಿಡ್‌ ಬಾಧೆಯಿಂದ ಗುಣಮುಖರಾದವರ ಸಂಖ್ಯೆಯು ಒಂದು ಲಕ್ಷವನ್ನು ದಾಟಿದೆ. ಪ್ರಮಾಣವು ಶೇ 48.31ಕ್ಕೆ ಹೆಚ್ಚಿದೆ.

41.03 ಲಕ್ಷ ಗಂಟಲು ದ್ರವ ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಈಗ ಸರ್ಕಾರದ 688 ಮತ್ತು ಖಾಸಗಿ ಕ್ಷೇತ್ರದ 208 ಪ್ರಯೋಗಾಲಯಗಳು ಈ ಪರೀಕ್ಷೆಯನ್ನು ನಡೆಸುತ್ತಿವೆ.

ಈಗ ದೇಶದಲ್ಲಿ ಕೋವಿಡ್‌ ಪರೀಕ್ಷೆಗಳನ್ನು ಗಣನೀಯವಾಗಿ ಏರಿಸಲಾಗಿದೆ. ದಿನವೊಂದಕ್ಕೆ ಲಕ್ಷಕ್ಕೂ ಹೆಚ್ಚು ಮಾದರಿಗಳ ತಪಾಸಣೆ ನಡೆಯುತ್ತಿದೆ. ಇದುವೇ ಪ್ರಕರಣಗಳ ಏರಿಕೆಗೆ ಮುಖ್ಯ ಕಾರಣ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಜಾಗತಿಕ ಮಟ್ಟದಲ್ಲಿ ಕೋವಿಡ್‌ ಮರಣ ಪ್ರಮಾಣವು ಶೇ 6.13ರಷ್ಟಿದೆ. ಆದರೆ, ಭಾರತದಲ್ಲಿ ಈ ಪ್ರಮಾಣ ಶೇ 2.82 ಮಾತ್ರ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣ ಪ್ರಮಾಣವು ಬಹಳ ಕಡಿಮೆ ಇದೆ ಎಂದು ಸಚಿವಾಲಯ ತಿಳಿಸಿದೆ.

ಇಎನ್‌ಟಿ ಮಾರ್ಗಸೂಚಿ: ಕಿವಿ–ಮೂಗು–ಗಂಟಲು (ಇಎನ್‌ಟಿ) ಸಮಸ್ಯೆಗಳಿರುವ ರೋಗಿಗಳ ತಪಾಸಣೆಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಆರೋಗ್ಯ ಸಚಿವಾಲಯವು ಪ್ರಕಟಿಸಿದೆ.

ಕೋವಿಡ್‌ನಂತಹ ಲಕ್ಷಣಗಳುಇದ್ದವರನ್ನು ಆಸ್ಪತ್ರೆಯ ಇಎನ್‌ಟಿ ಹೊರರೋಗಿ ವಿಭಾಗದಲ್ಲಿ ತಪಾಸಣೆಗೆ ಒಳಪಡಿಸಬಾರದು. ಅಂಥವರನ್ನು ‘ಕೋವಿಡ್‌ ತಪಾಸಣಾ ಕ್ಲಿನಿಕ್‌’ಗಳಲ್ಲಿಯೇ ಪರೀಕ್ಷೆ ಮಾಡಬೇಕು ಎಂದು ಈ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಇಎನ್‌ಟಿ ಹೊರರೋಗಿ ವಿಭಾಗಗಳಿಗೆ ಬರುವ ಇತರ ರೋಗಿಗಳನ್ನು ಕೋವಿಡ್‌ನಿಂದ ರಕ್ಷಿಸಲು ಇಂತಹ ಕ್ರಮ ಅನಿವಾರ್ಯ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT