ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕುರಿತು ಸಾರ್ಕ್‌ ರಾಷ್ಟ್ರಗಳ ನಾಯಕರೊಂದಿಗೆ ಮೋದಿ ವಿಡಿಯೋ ಕಾನ್ಫರೆನ್ಸ್‌

Last Updated 15 ಮಾರ್ಚ್ 2020, 13:35 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ವಿರುದ್ಧದ ಕಾರ್ಯತಂತ್ರದ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾರ್ಕ್‌ ( SAARC) ರಾಷ್ಟ್ರಗಳ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸುತ್ತಿದ್ದಾರೆ.

ಸಾರ್ಕ್‌ ರಾಷ್ಟ್ರಗಳ ನಾಯಕರು ಈ ವಿಡಿಯೋ ಕಾನ್ಫರೆನ್ಸ್‌ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಕೋವಿಡ್‌ 19 ವಿರುದ್ಧ ಭಾರತ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ವಿವರಿಸಿದ್ದಾರೆ.

ಭಾರತದಲ್ಲಿ 150 ಕ್ಕಿಂತಲೂ ಕಡಿಮೆ ಕೋವಿಡ್‌ 19ಪ್ರಕರಣಗಳು ಪತ್ತೆಯಾಗಿವೆ. ಆದರೂ ನಾವು ಹೆಚ್ಚು ಜಾಗೃತರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ‘ಜಾಗೃತರಾಗಿ, ಆತಂಕಗೊಳ್ಳಬೇಡಿ’ ಎಂಬ ಮಂತ್ರವನ್ನು ಕೋವಿಡ್‌ ವಿರುದ್ಧ ಹೋರಾಡಲು ಭಾರತ ಬಳಸುತ್ತಿದೆ. ಹೊರ ದೇಶಗಳಿಂದ ಭಾರತಕ್ಕೆ ಬರುವವರನ್ನು ಪರೀಕ್ಷೆ ಒಳಪಡಿಸುವ ಕಾರ್ಯಕವನ್ನು ಭಾರತದ ಜನವರಿಯ ಮಧ್ಯ ಭಾಗದಿಂದಲೂ ಆರಂಭಿಸಿದೆ. ಅಲ್ಲದೆ, ಪ್ರವಾಸದ ಮೇಲೆ ಸಾಕಷ್ಟು ನಿಯಮಗಳನ್ನು ವಿಧಿಸಿದೆ. ಆತಂಕ ನಿವಾರಿಸಲು ಹಂತ ಹಂತವಾಗಿ ಕ್ರಮಗಳನ್ನು ಕೈಗೊಂಡಿದ್ದೇವೆ. ಹೊರ ದೇಶದಲ್ಲಿರುವ ಭಾರತೀಯರನ್ನು ದೇಶಕ್ಕೆ ಕರೆ ತರುವ ಪ್ರಯತ್ನಗಳನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ಈ ವರೆಗೆ 1400 ಮಂದಿಯನ್ನು ಭಾರತಕ್ಕೆ ಕರೆತಂದಿದ್ದೇವೆ. ಇದೇ ವೇಳೆ ನೆರೆ ರಾಷ್ಟ್ರಗಳ ಕೆಲ ನಾಗರಿಕರನ್ನೂ ಸೋಂಕು ಪೀಡಿತ ದೇಶದಿಂದ ಭಾರತ ಕರೆ ತಂದಿದೆ ಎಂದು ಮೋದಿ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಹೇಳಿದರು.

ವೀಕ್ಷಿಸಿ: ಸಾರ್ಕ್‌ ರಾಷ್ಟ್ರಗಳ ನಾಯಕರೊಂದಿಗಿನ ಮೋದಿ ವಿಡಿಯೋ ಕಾನ್ಫರೆನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT