ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update | 5.66 ಲಕ್ಷ ದಾಟಿದ ಪ್ರಕರಣ, 3.34 ಲಕ್ಷ ಜನರು ಗುಣಮುಖ

ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ಪ್ರಕರಣಗಳು ವ್ಯಾಪಕವಾಗುತ್ತಿದ್ದು, ಜನರ ಆತಂಕವನ್ನು ಇಮ್ಮಡಿಗೊಳಿಸಿದೆ. ಭಾರತದಲ್ಲಿ ಈವರೆಗೆ 5,66,840 ಪ್ರಕರಣಗಳು ದಾಖಲಾಗಿದ್ದು, 16,893 ಮಂದಿ ಮೃತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ನೀಡಿದೆ.

ಮಹಾರಾಷ್ಟ್ರ ಕೊರೊನಾ ಸೋಂಕಿನ ಕೇಂದ್ರ ಬಿಂದುವಾಗಿದ್ದು ಒಟ್ಟು 1,69,883 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 7, 610 ಮಂದಿ ಮೃತಪಟ್ಟಿದ್ದು, 73, 313 ಪ್ರಕರಣಗಳು ಕ್ರಿಯಾಶೀಲವಾಗಿವೆ.

ತಮಿಳುನಾಡಿನಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಈವರೆಗೆ 86,224 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 1,141 ಸೋಂಕಿತರು ಮೃತರಾಗಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 85,161, ಗುಜರಾತ್‌ನಲ್ಲಿ 31,938, ಉತ್ತರ ಪ್ರದೇಶದಲ್ಲಿ 22,828, ಪಶ್ಚಿಮ ಬಂಗಾಳದಲ್ಲಿ 17,907, ರಾಜಸ್ಥಾನದಲ್ಲಿ 17,660, ತೆಲಂಗಾಣದಲ್ಲಿ 15,394 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ದೇಶದಾದ್ಯಂತ ಒಟ್ಟು 2,15,125 ಕೊರೊನಾ ಪ್ರಕರಣಗಳು ಕ್ರಿಯಾಶೀಲವಾಗಿದ್ದು, 3,34,821 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT