ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಮಾರಿ ಕೋವಿಡ್‌–19 ಪೀಡಿತ ದೇಶಗಳು ಯಾವುವು, ಏನಾಗಿದೆ?

Last Updated 28 ಮಾರ್ಚ್ 2020, 21:08 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕೊರೊನಾ ಸೋಂಕು(ಕೋವಿಡ್‌–19) ಪರಿಣಾಮ ಏನಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

* ಕಲಬುರ್ಗಿ: ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಬಿರಾಳ ಹಿಸ್ಸಾ‌ ಗ್ರಾಮದ ಬಳಿ ಜಿಲ್ಲೆಯ ‌ಗಡಿಯನ್ನು ಬಂದ್ ಮಾಡಲು ಪೊಲೀಸರೇ ಮುಂದೆ ನಿಂತು ಡಾಂಬರ್ ರಸ್ತೆಯನ್ನು ಅಗೆಸಿ, ವಾಹನಗಳು ಸಂಚರಿಸದಂತೆ ತಡೆದಿದ್ದಾರೆ.

* ಕಲಬುರ್ಗಿ: ಚಿಂಚೋಳಿ ತಾಲ್ಲೂಕಿನಿಂದ ಗುಳೆ ಹೋಗಿದ್ದ 60ಕ್ಕೂ ಹೆಚ್ಚು ಜನರು ಮುಂಬೈನಿಂದ 700 ಕಿ.ಮೀ. ನಡೆದು ತಮ್ಮೂರಿಗೆ ಬರುತ್ತಿದ್ದಾರೆ.

* ಚಡಚಣ (ವಿಜಯಪುರ): ಇಲ್ಲಿನ ಧೂಳಖೇಡ ಸಮೀಪದ ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳ ಅಂದಾಜು 3 ಸಾವಿರಕ್ಕೂ ಅಧಿಕ ಕಾರ್ಮಿಕರು ಸಿಲುಕಿಕೊಂಡಿದ್ದಾರೆ.

* ಬೆಳಗಾವಿ: ನೆರೆಯ ಮಹಾರಾಷ್ಟ್ರ ಹಾಗೂ ಗೋವಾಕ್ಕೆ ದಿನಗೂಲಿ ಮಾಡಲು ಹೋಗಿದ್ದ ಹಲವು ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಬೆಳಗಾವಿ ಮೂಲಕ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ.

* ಕಾರವಾರ:ಸೀಬರ್ಡ್ನೌಕಾನೆಲೆಯ ‘ಐ.ಎನ್.ಎಸ್ ಪತಂಜಲಿ’ ಆಸ್ಪತ್ರೆಯು, ಕೋವಿಡ್ 19 ಪೀಡಿತರಿಗೆ ಚಿಕಿತ್ಸೆ ನೀಡಲಾರಂಭಿಸಿದ ಸಶಸ್ತ್ರ ಪಡೆಯ ಮೊದಲ ಆಸ್ಪತ್ರೆಯಾಗಿದೆ.

* ಮೈಸೂರು:ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ 900 ಸಿಬ್ಬಂದಿಗೆ ಹೋಂ ಕ್ವಾರಂಟೈನ್‌.

* ಮಡಿಕೇರಿ: ಕೇರಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನೂ ಕರ್ನಾಟಕ ಬಂದ್‌ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

* ಮಂಗಳೂರು: ದೇರಳಕಟ್ಟೆಯಲ್ಲಿರುವ ನಿಟ್ಟೆ ಡೀಮ್ಡ್‌ ಟು ಬಿ ವಿಶ್ವವಿದ್ಯಾಲಯದ ನ್ಯಾಯಮೂರ್ತಿ ಕೆ.ಎಸ್‌.ಹೆಗ್ಡೆ ಚಾರಿಟಬಲ್‌ ಆಸ್ಪತ್ರೆ ಶನಿವಾರದಿಂದ ಟೆಲಿಮೆಡಿಸಿನ್‌ ಸೇವೆ ಆರಂಭಿಸಿದೆ.

* ಮಂಗಳೂರು: ಮೀನುಗಾರಿಕೆಯಲ್ಲಿ ತೊಡಗಿರುವ ನೂರಾರು ಕಾರ್ಮಿಕರು ಇಲ್ಲಿನ ಹಳೆಯ ಬಂದರು ಧಕ್ಕೆಯಲ್ಲಿ ಲಂಗರು ಹಾಕಿರುವ ಬೋಟ್‌ಗಳಲ್ಲಿ ಸಿಲುಕಿದ್ದಾರೆ.

* ಮಂಗಳೂರು: ಸಂಪೂರ್ಣ ಬಂದ್‌ಗೆ ಆದೇಶಿಸಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಯಾವುದೇ ಚಟುವಟಿಕೆಗಳು ಇರಲಿಲ್ಲ. ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು.

* ಉಡುಪಿ: ಉದ್ಯಮಿ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರು ತಮ್ಮ ಬಾಡಿಗೆದಾರರ ರಕ್ಷಣೆಗೆ ಮುಂದಾಗಿದ್ದು, ಒಂದು ತಿಂಗಳ ₹ 1.10 ಲಕ್ಷ ಬಾಡಿಗೆ ಮನ್ನಾ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT