ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Updates | ಮಹಾರಾಷ್ಟ್ರದಲ್ಲಿ ಲಕ್ಷದಾಟಿದ ಸೋಂಕಿತರ ಸಂಖ್ಯೆ

Last Updated 12 ಜೂನ್ 2020, 16:11 IST
ಅಕ್ಷರ ಗಾತ್ರ

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ 141842 ಕ್ರಿಯಾಶೀಲ ಕೊರೊನಾವೈರಸ್ಪ್ರಕರಣಗಳಿದ್ದು ಇಲ್ಲಿಯವರೆಗೆ ಸಾವಿಗೀಡಾದವರ ಸಂಖ್ಯೆ 8498 ಆಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 297535 ಆಗಿದೆ.

ಮಿಜೋರಾಂನಲ್ಲಿ ಇಬ್ಬರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 104ಕ್ಕೆ ಏರಿದೆ. ಪ್ರಸ್ತುತ ಇಲ್ಲಿ 103 ಸಕ್ರಿಯ ಪ್ರಕರಣಗಳಿದ್ದು ಇದರಲ್ಲಿ 51 ಗಂಡಸರು ಮತ್ತು 52 ಮಹಿಳೆಯರು ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಹರಿಯಾಣದಲ್ಲಿ ಶುಕ್ರವಾರ 366 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 6334 ಆಗಿದೆ. ಅದೇ ವೇಳೆ ಗುಜರಾತಿನಲ್ಲಿ 495 ಪ್ರಕರಣಗಳು ವರದಿಯಾಗಿದ್ದು ಪ್ರಕರಣಗಳ ಸಂಖ್ಯೆ 22562ಕ್ಕೇರಿದೆ.ಇಲ್ಲಿಯವರೆಗೆ 15,501 ಮಂದಿ ಚೇತರಿಸಿಕೊಂಡಿದ್ದು, 1416 ಮಂದಿ ಸಾವಿಗೀಡಾಗಿದ್ದಾರೆ.

ಗೋವಾದಲ್ಲಿ ಇಂದು 46 ಪಾಸಿಟಿವ್ ಪ್ರಕರಣಗಳು ವರದಿ ಆಗಿವೆ. ಸದ್ಯ 463 ಸೋಂಕು ಪ್ರಕರಣಗಳು ಇಲ್ಲಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ 476 ಹೊಸ ಪ್ರಕರಣಗಳು ಪತ್ತೆಯಾಗಿದ್ದು 9 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 10244 ಆಗಿದ್ದು ಈವರೆಗೆ 451 ಮಂದಿ ಸಾವಿಗೀಡಾಗಿದ್ದಾರೆ. 5587 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಮಹಾರಾಷ್ಟ್ರದಲ್ಲಿ ಇಂದು 3494 ಪಾಸಿಟಿವ್ ಪ್ರಕರಣಗಳು ವರದಿ ಆಗಿದ್ದು ಸೋಂಕಿತರ ಸಂಖ್ಯೆ 1,01,141 ಆಗಿದೆ.ಇಲ್ಲಿಯವರೆಗೆ 37117 ಮಂದಿ ಸಾವಿಗೀಡಾಗಿದ್ದಾರೆ. ಶುಕ್ರವಾರ 127 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.
ಕೇರಳದಲ್ಲಿ 78 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಬ್ಬವ್ಯಕ್ತಿ ಮೃತಪಟ್ಟಿದ್ದಾರೆ.

ಪಂಜಾಬ್‌ನಲ್ಲಿ 4 ಮಂದಿ ಸಾವಿಗೀಡಾಗಿದ್ದು 99ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇಲ್ಲಿ ಒಟ್ಟು 2986 ಪ್ರಕರಣಗಳಿದ್ದು ಇವುಗಳಲ್ಲಿ 641 ಕ್ರಿಯಾಶೀಲ ಪ್ರಕರಣಗಳಿವೆ. ಈವರೆಗೆ 63 ಮಂದಿ ಸಾವಿಗೀಡಾಗಿದ್ದಾರೆ.

ತಮಿಳುನಾಡಿನಲ್ಲೇ ಒಂದೇ ದಿನ 1992 ಪ್ರಕರಣಗಳು ಬೆಳಕಿಗೆ ಬಂದಿವೆ. 18 ಮಂದಿ ಸಾವಿಗೀಡಾಗಿದ್ದು 1342 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 40698 ಆಗಿದ್ದು ಇಲ್ಲಿಯವರೆಗೆ 367 ಮಂದಿ ಸಾವಿಗೀಡಾಗಿದ್ದಾರೆ. 22047 ಮಂದಿ ಚೇತರಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ 20 ಮಂದಿ ಶುಕ್ರವಾರ ಸಾವಿಗೀಡಾಗಿದ್ದಾರೆ. 528 ಮಂದಿಗೆ ಸೋಂಕು ಪತ್ತೆಯಾಗಿದೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 365, ಸೋಂಕಿತರ ಸಂಖ್ಯೆ 12.616 ಆಗಿದೆ.

ಒಡಿಶಾದಲ್ಲಿ 112 ಹೊಸ ಪ್ರಕರಣಗಳು ಶುಕ್ರವಾರ ವರದಿ ಆಗಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ತ್ರಿಪುರಾದಲ್ಲಿ 18 ಮಂದಿಗೆ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 916 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT