ಸೋಮವಾರ, ಮಾರ್ಚ್ 8, 2021
31 °C

ಮಾಲ್ಡೀವ್ಸ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ 200 ಪ್ರಜೆಗಳನ್ನು ಕರೆತರಲಿದೆ ಭಾರತ

ಅನಿರ್ಬನ್‌ ಭೌಮಿಕ್‌ Updated:

ಅಕ್ಷರ ಗಾತ್ರ : | |

COVID

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಮಾಲ್ಡೀವ್ಸ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ 200 ಭಾರತೀಯರನ್ನು ಈ ವಾರದಲ್ಲಿ ತಾಯ್ನಾಡಿಗೆ ಕರೆ ತರುವ ಸಾಧ್ಯತೆ ಇದೆ. ಹಡಗು ಮೂಲಕ 200 ಭಾರತೀಯರನ್ನು ಕರೆತರಲಾಗುವುದು ಎಂದು ಮಾಲೆನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೇಳಿದೆ.

ಮಾಲ್ಡೀವ್ಸ್‌ನಿಂದ ಹಡಗು ಕೇರಳದ ಕೊಚ್ಚಿಗೆ ಬಂದು ತಲುಪಲಿದೆ.ಅಲ್ಲಿ 14 ದಿನಗಳ ಕಾಲ ಕ್ವಾರೆಂಟೈನ್‌ನಲ್ಲಿದ್ದು ಆಮೇಲೆ ಕೇರಳ ಮತ್ತು ಕೇಂದ್ರ ಸರ್ಕಾರದ ಅನುಮತಿ ಪಡೆದು ಪ್ರಯಾಣಿಕರು ಅಲ್ಲಿಂದ ತಮ್ಮ ಊರುಗಳಿಗೆ ಪ್ರಯಾಣಿಸಬಹುದಾಗಿದೆ ಎಂದು ರಾಯಭಾರಿ ಕಚೇರಿ ಹೇಳಿದೆ.

ಈಗಾಗಲೇ ರಾಯಭಾರಿ ಕಚೇರಿಯಲ್ಲಿ ನೋಂದಣಿ ಮಾಡಿರುವವರಲ್ಲಿ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರು,ಗರ್ಭಿಣಿಯರು, ಹಿರಿಯ ನಾಗರಿಕರು, ಪ್ರವಾಸಿಗರು ಮತ್ತು ಕೆಲಸ ಕಳೆದುಕೊಂಡಿರುವ ಕಾರ್ಮಿಕರಗೆ ಆದ್ಯತೆ ನೀಡಲಾಗುವುದು ಎಂದು ರಾಯಭಾರಿ ಕಚೇರಿ ಹೇಳಿದೆ. 

ಮೊದಲ ಹಡಗಿನಲ್ಲಿ 200 ಮಂದಿಯನ್ನು ಕರೆತರಲಾಗುವುದು. ಆದರೆ ಯಾವಾಗ ಎಂದು ಇನ್ನೂ ನಿರ್ಧಾರವಾಗಿಲ್ಲ. 

ಮಾಲೆನಿಂದ ಕೊಚ್ಚಿಗೆ ತಲುಪಲು 48 ಗಂಟೆಗಳ ಕಾಲ ಹಡಗು ಪ್ರಯಾಣವಿದೆ. ಮುಂಗಾರು ಮುಂಚಿನ ಹವಾಮಾನದಲ್ಲಿ ಪ್ರಯಾಣ ಮಾಡುವುದು ಕಷ್ಟವಿದೆ. ಹಡಗಿನಲ್ಲಿ ಅಗತ್ಯ ವೈದ್ಯಕೀಯ ಸಹಾಯಗಳನ್ನು ಒದಗಿಸಲಾಗುವುದು. ಅದೇ ವೇಳೆ ಕೊಚ್ಚಿಯಲ್ಲಿ ಕ್ವಾರಂಟೈನ್‌ನಲ್ಲಿರಿಸುವಾಗಲೂ ಸಾಮಾನ್ಯ ಸೌಕರ್ಯಗಳನ್ನೇ ಅವರಿಗೆ ನೀಡಾಲಾಗುವುದು.ಅದಕ್ಕಾಗಿ ಹಣ ಪಾವತಿ ಮಾಡಬೇಕಿದೆ 
ಕೊರೊನಾ ಹರಡುತ್ತಿದ್ದಂತ ಭಾರತವು ಚೀನಾ, ಇಟಲಿ, ಇರಾನ್, ಅಫ್ಘಾನಿಸ್ತಾನ ಮತ್ತು ಜಪಾನ್‌ನಲ್ಲಿದ್ದ ಭಾರತೀಯರನ್ನು ಕರೆದುಕೊಂಡು ಬಂದಿತ್ತು.

ಮಲೇಷ್ಯಾ ಮತ್ತು ಇತರ ದೇಶದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಕರೆತರಲು ಭಾರತ ಚಿಂತನೆ ನಡೆಸುತ್ತಿದೆ. ಆದಾಗ್ಯೂ, ಕಳೆದ ಕೆಲವು ವಾರಗಳಲ್ಲಿ ಹೊರದೇಶದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬರುವ ಯಾವುದೇ ಕಾರ್ಯ ನಡೆದಿಲ್ಲ.

ಮಾಲ್ಡೀವ್ಸ್‌ನಲ್ಲಿ ಸರಿಸುಮಾರು 2000 ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದು, ಹಣ, ಆಹಾರ, ವಸತಿ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ. ಜನಸಾಂದ್ರತೆಯಿಂದಾಗಿ ವೈರಸ್ ವೇಗವಾಗಿ ಹಬ್ಬುತ್ತಿದೆ.ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ದಿಲೀಪ್ ಕುಮಾರ್ ಎಂಬ ಟ್ವೀಟಿಗರೊಬ್ಬರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಟ್ವೀಟ್ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು