ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಹರಡದಂತೆ ನಿಗಾವಹಿಸಲು ಪೋಲಿಯೊ ಕಣ್ಗಾವಲು ಸಿಬ್ಬಂದಿ ಬಳಕೆ: ಆರೋಗ್ಯ ಇಲಾಖೆ

Last Updated 17 ಏಪ್ರಿಲ್ 2020, 3:38 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ನಿಯಂತ್ರಣ ಬಂದ ನಂತರವೂ ಅದು ಪುನಃ ಹರಡದಂತೆ ನಿಗಾ ವಹಿಸುವ ಅಗತ್ಯವಿದೆ. ಹೀಗಾಗಿ ದೇಶದಲ್ಲಿ ಪೋಲಿಯೊ ಪ್ರಕರಣಗಳ ಕಣ್ಗಾವಲು ಕಾರ್ಯಕ್ರಮದ ಸಿಬ್ಬಂದಿಯ ಸೇವೆಯನ್ನು ಬಳಸಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ಸಚಿವಾಲಯ ಮುಂದಾಗಿವೆ.

‘ಕೋವಿಡ್‌–19 ಮತ್ತೆ ವ್ಯಾಪಿಸದಂತೆ ನಿಗಾವಹಿಸುವ ಕಾರ್ಯ ಮುಂದಿನ ಹಲವು ತಿಂಗಳು ಕಾಲ ನಡೆಯುವ ಸಾಧ್ಯತೆ ಇದೆ. ಪೋಲಿಯೊ ನಿರ್ಮೂಲನಾ ಕಾರ್ಯಕ್ರಮಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ತರಬೇತಿ ನೀಡಿರುವ 1,600 ಸಿಬ್ಬಂದಿ ಇನ್ನು ಮುಂದೆ ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ರೂಪಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್ವಾಲ್‌ ಗುರುವಾರ ತಿಳಿಸಿದ್ದಾರೆ.

‘ಈ ಸಂಬಂಧ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ಪೋಲಿಯೊ ನಿರ್ಮೂಲನಾ ಕಾರ್ಯಕ್ರಮದ 227 ವೈದ್ಯರು, 1,252 ಕ್ಷೇತ್ರ ನಿರ್ವಹಣಾ ಸಿಬ್ಬಂದಿ, ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ 106 ಸಿಬ್ಬಂದಿ, ಇತರೆ ರೋಗಗಳ ನಿಯಂತ್ರಣ ಕಾರ್ಯಕ್ರಮದ 27 ಹಾಗೂ ರಕ್ತದೊತ್ತಡಕ್ಕೆ ಸಂಬಂಧಿಸಿದ ಯೋಜನೆಯ 26 ಸಿಬ್ಬಂದಿ ಈ ತಂಡದಲ್ಲಿರಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT