ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಪರಿಣಾಮ: ಓಲಾ, ಊಬರ್‌ ಕ್ಯಾಬ್‌ ಪೂಲಿಂಗ್‌ ಸೇವೆ ಸ್ಥಗಿತ

Last Updated 21 ಮಾರ್ಚ್ 2020, 7:45 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ಕ್ಯಾಬ್‌ ಸೇವೆಗಳಿಗೆ ಸಂಪರ್ಕ ವ್ಯವಸ್ಥೆಯಾಗಿರುವ ಓಲಾ ಮತ್ತು ಊಬರ್‌ ಕಂಪನಿಗಳು ಶೇರ್‌ ಅಥವಾ ಪೂಲಿಂಗ್‌ ಸೇವೆಗಳನ್ನು ಸ್ಥಗಿತಗಳಿಸಿವೆ. ಕೊರೊನಾ ವೈರಸ್‌ ಸೋಂಕು ಹರಡುವಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಶುಕ್ರವಾರ ತಿಳಿಸಿವೆ.

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕ್ಯಾಬ್‌ಗಳಲ್ಲಿ ಪೂಲಿಂಗ್‌ ಸೇವೆ ಬಳಸಿ ಅಪರಿಚತರೊಂದಿಗೆ ಕ್ಯಾಬ್‌ ಹಂಚಿಕೊಂಡು ಪ್ರಯಾಣ ನಡೆಸುವುದರಿಂದ ಜನರು ಹಿಂದೆ ಸರಿದಿದ್ದಾರೆ. ಕೋವಿಡ್‌–19 ಆತಂಕ ಶುರುವಾದಾಗಲಿನಿಂದ ಪೂಲಿಂಗ್‌ ಸೇವೆ ಪಡೆದವರ ಸಂಖ್ಯೆ ತೀವ್ರ ಇಳಿಮುಖವಾಗಿದೆ ಎಂದು ಕಂಪನಿಗಳು ಹೇಳಿವೆ.

ಅನಗತ್ಯ ಸಂಚಾರವನ್ನು ತಪ್ಪಿಸಲು ಜನರಲ್ಲಿ ಮಾಡುವುದಾಗಿ ಹೇಳಿರುವ ಊಬರ್‌ ವಕ್ತಾರ, ದೇಶದಲ್ಲಿ ಊಬರ್‌ ಕಾರ್ಯಾಚರಿಸುತ್ತಿರುವ ಎಲ್ಲ ಭಾಗಗಳಲ್ಲಿಯೂ ಪೂಲಿಂಗ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.

ಮುಂದಿನ ಅಧಿಸೂಚನೆಯ ವರೆಗೂ 'ಓಲಾ ಶೇರ್‌' ಆಯ್ಕೆಯನ್ನು ಕೈಬಿಡಲಾಗಿದೆ. ತಾತ್ಕಾಲಿಕವಾಗಿ ಈ ಸೇವೆ ಸ್ಥಗಿತಗೊಳಿಸಲಾಗಿದೆ. ಕೊರೊನಾ ವೈರಸ್‌ ಸೋಂಕು ಹರಡದಂತೆ ವಹಿಸಲಾಗಿರುವ ಕ್ರಮಗಳಲ್ಲಿ ಇದೂ ಸಹ ಸೇರಿದೆ ಎಂದು ಓಲಾ ಹೇಳಿದೆ.

ಇದರಿಂದಾಗಿ ಅನಗತ್ಯ ಸಂಚಾರ ತಪ್ಪಲಿದೆ. ಒಬ್ಬರನ್ನೊಬ್ಬರು ಸಂಪರ್ಕಿಸುವ ಪ್ರಮಾಣದಲ್ಲಿಯೂ ಕಡಿಮೆಯಾಗಲಿದೆ ಎಂದುಕಂಪನಿಗಳು ಹೇಳಿವೆ.

ಇತ್ತೀಚಿನ ವರದಿಗಳ ಪ್ರಕಾರ, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಒಟ್ಟು 16 ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT