ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಟಿಬಾಕ್ಸ್‌ ನಾರ್ವೆ ಚೆಸ್‌ ಟೂರ್ನಿ: ಆನಂದ್‌–ಶಕ್ರಿಯಾರ್‌ ಪಂದ್ಯ ಡ್ರಾ

ವೆಸ್ಲೆ ಸೊಗೆ ಒಲಿದ ಜಯ
Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಸ್ವಾವೆಂಜರ್‌, ನಾರ್ವೆ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು ಇಲ್ಲಿ ನಡೆಯುತ್ತಿರುವ ಅಲ್ಟಿ ಬಾಕ್ಸ್‌ ಚೆಸ್‌ ಟೂರ್ನಿಯ ಆರನೇ ಸುತ್ತಿನ ಪಂದ್ಯವನ್ನೂ ಡ್ರಾ ಮಾಡಿಕೊಂಡಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಆನಂದ್‌ ಅವರು ಅಜರ್‌ ಬೈಜಾನ್‌ನ ಶಕ್ರಿಯಾರ್‌ ಮಮೆದ್ಯರೋವ್‌ ಅವರೊಂದಿಗೆ ಪಾಯಿಂಟ್‌ ಹಂಚಿಕೊಂಡರು.

ನಾರ್ವೆಯ ವಿಶ್ವಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರನ್ನು ಅಮೆರಿಕದ ವೆಸ್ಲೆ ಸೊ ಮಣಿಸಿದರು. ಇದರೊಂದಿಗೆ ವೆಸ್ಲೆ ಅವರು ಟೂರ್ನಿಯಲ್ಲಿ ಮೊದಲ ಜಯ ತಮ್ಮದಾಗಿಸಿಕೊಂಡರು. ಈ ವರ್ಷ ನಡೆದ ಅಂತರರಾಷ್ಟ್ರೀಯ ಚೆಸ್‌ ಪಂದ್ಯಗಳಲ್ಲಿ ಕಾರ್ಲ್‌ಸನ್‌ ಅವರು ಮೊದಲ ಬಾರಿಗೆ ಸೋತಿದ್ದಾರೆ.

ಸದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಆನಂದ್‌ 4ನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT