ಕಡಲ ಕೊರೆತಕ್ಕೆ ಸಾವಿರಾರು ಕಿ.ಮೀ. ತೀರ ಬಲಿ!

7

ಕಡಲ ಕೊರೆತಕ್ಕೆ ಸಾವಿರಾರು ಕಿ.ಮೀ. ತೀರ ಬಲಿ!

Published:
Updated:
Deccan Herald

ದೇಶದ ಕರಾವಳಿ ತೀರಗಳಲ್ಲಿ ಮೂರನೇ ಒಂದರಷ್ಟು ಭಾಗವು ಕಡಲ ಕೊರೆತದಿಂದ ಮತ್ತು ಮಾನವ ಚಟುವಟಿಕೆಗಳಿಂದ ಸವೆದುಹೋಗಿದೆ.

ಕಡಲ ಕೊರೆತದಲ್ಲಿ ಕೊಚ್ಚಿಹೋದ ಮರಳು, ಮಣ್ಣು ಮತ್ತೊಂದೆಡೆ ಜಮೆಯಾದ ಕಾರಣ ಅಷ್ಟೇ ಪ್ರಮಾಣದಷ್ಟು ಕಡಲತೀರಗಳ ವಿಸ್ತೀರ್ಣ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರ (ಎನ್‌ಸಿಸಿಆರ್) ಹೇಳಿದೆ.

**

* ಸಮುದ್ರದ ಉಬ್ಬರವಿಳಿತ, ಚಂಡಮಾರುತ  ಮತ್ತು ಕಡಲತೀರಗಳಲ್ಲಿ ನಿರ್ಮಾಣ ಚಟುವಟಿಕೆಗಳ ಕಾರಣ ಕಡಲ ಕೊರೆತ 

* ಒಂದೆಡೆ ಕೊಚ್ಚಿಹೋದಮರಳು, ಮಣ್ಣು ಮತ್ತೊಂದೆಡೆ ಶೇಖರವಾಗಿ  ಕೊಚ್ಚಿಹೋದಷ್ಟೇ ಉದ್ದದಷ್ಟು ಕಡಲತೀರಗಳ ವಿಸ್ತೀರ್ಣ ಹೆಚ್ಚಳವಾಗಿದೆ

* ಬಂಗಾಳ ಕೊಲ್ಲಿಯಲ್ಲಿ ಉಬ್ಬರವಿಳಿತದ ಪ್ರಮಾಣ ಅಧಿಕ. ಹೀಗಾಗಿ ಪೂರ್ವ ಕರಾವಳಿಯಲ್ಲಿ ಕಡಲ ಕೊರೆತ ಹೆಚ್ಚು. ಈಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಅಲೆಗಳ ಸರಾಸರಿ ಎತ್ತರವೂ ಏರಿಕೆ

* ಪಶ್ಚಿಮ ಬಂಗಾಳದ ಕರಾವಳಿಯ ಅರ್ಧಕ್ಕೂ ಹೆಚ್ಚು ಭಾಗ ಕೊರೆತಕ್ಕೆ ತುತ್ತಾಗಿದೆ

* ಅರಬ್ಬೀ ಸಮುದ್ರದ ದಕ್ಷಿಣ ಭಾಗದಲ್ಲಿ ಉಬ್ಬರವಿಳಿತ ಅಧಿಕ. ಹೀಗಾಗಿ ಪಶ್ಚಿಮ ಕರಾವಳಿ ಭಾಗದಲ್ಲಿ ಕೇರಳ ಕಡಲ ತೀರಗಳಲ್ಲಿ ಕೊರೆತದ ಸಮಸ್ಯೆ ಹೆಚ್ಚು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !