ಶುಕ್ರವಾರ, ಮೇ 29, 2020
27 °C

1800 ಕೆ.ಜಿ ಮಾದಕ ವಸ್ತು ವಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ನೋಯ್ಡಾ: ಗ್ರೇಟರ್‌ ನೋಯ್ಡಾದ ಮನೆಯೊಂದರಿಂದ 1,800 ಕೆ.ಜಿ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಮಾದಕವಸ್ತು ಕಳ್ಳಸಾಗಣೆ ನಿಯಂತ್ರಣ ದಳ (ಎನ್‌ಸಿಬಿ) ತಿಳಿಸಿದೆ.

‘ಸಾಮಾನ್ಯವಾಗಿ ಇಷ್ಟು ದೊಡ್ಡ ಪ್ರಮಾಣದ ಮಾದಕವಸ್ತು, ಕಾರ್ಖಾನೆಗಳಲ್ಲಷ್ಟೆ ಪತ್ತೆಯಾಗುತ್ತಿತ್ತು. ಆದರೆ ವಸತಿ ಪ್ರದೇಶದಲ್ಲಿ ಪತ್ತೆಯಾಗಿರುವುದು ದೇಶದಲ್ಲಿ ಇದೇ ಮೊದಲು’ ಎಂದು ಎನ್‌ಸಿಬಿ ಅಧಿಕಾರಿ ಹೇಳಿದ್ದಾರೆ.  ಮೂವರು ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಮಾದಕವಸ್ತು ಕಳ್ಳಸಾಗಣೆ ನಿಯಂತ್ರಣ ದಳ ಹೇಳಿದೆ. 

ಮಾದಕವಸ್ತು ಪತ್ತೆಯಾದ ಮನೆ ಐಪಿಎಸ್‌ ಅಧಿಕಾರಿ ಡಿಪಿಎನ್‌ ಪಾಂಡೆ ಎನ್ನುವವರಿಗೆ ಸೇರಿದ್ದು. ಅವರು ಮನೆಯನ್ನು ಬಾಡಿಗೆಗೆ ನೀಡಿದ್ದರು ಎಂದು ತಿಳಿದುಬಂದಿದೆ. 

‘ಪ್ರಕರಣದ ಬಗ್ಗೆ ಆಘಾತವಾಗಿದೆ. ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸುತ್ತೇನೆ’ ಎಂದು ಪಾಂಡೆ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು