ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಖರೀದಿಸಿ 'ಭಾರತೀಯ ಮನೋರಂಜನ್ ಬ್ಯಾಂಕ್' ಆಟಿಕೆ ನೋಟು ಕೊಟ್ಟು ವಂಚಿಸಿದರು!

Last Updated 23 ಅಕ್ಟೋಬರ್ 2018, 16:17 IST
ಅಕ್ಷರ ಗಾತ್ರ

ಲುಧಿಯಾನ: ಇಲ್ಲಿನ ಜೋಧಾನ್ ನಗರದ ಜ್ಯುವೆಲ್ಲರಿಯೊಂದರಲ್ಲಿ 56 ಗ್ರಾಂ ಚಿನ್ನ ಖರೀದಿಸಿದ ವ್ಯಕ್ತಿಗಳು ಚಿನ್ನದಂಗಡಿಯವರಿಗೆ ಆಟಿಕೆ ನೋಟು ಕೊಟ್ಟು ವಂಚಿಸಿದ ಘಟನೆ ವರದಿಯಾಗಿದೆ.
ನಗರದ ವರ್ಮಾ ಜ್ಯುವೆಲ್ಲರಿಯಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಚಿನ್ನದ ಅಂಗಡಿ ಮಾಲೀಕ ಶ್ಯಾಮ್ ಸುಂದರ್ ವರ್ಮಾ ಪ್ರಕಾರ ಇಬ್ಬರು ವ್ಯಕ್ತಿಗಳು (ಒಬ್ಬ ಗಂಡಸು ಮತ್ತು ಓರ್ವಮಹಿಳೆ) ಬೂದು ಬಣ್ಣದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದಿಳಿದು 56 ಗ್ರಾಂ ಚಿನ್ನ ಖರೀದಿಸಿದ್ದರು.ಅದರ ಮೌಲ್ಯ ₹1.70 ಲಕ್ಷ ಆಯಿತು.ಹಣವನ್ನು ಕಾರಿನಲ್ಲಿ ಇಟ್ಟಿದ್ದೇವೆ ತೆಗೆದುಕೊಂಡು ಬರುತ್ತೀವಿ ಎಂದು ಅವರು ಹೊರಗೆ ಹೋದರು.ಆಮೇಲೆ ₹500 ಮತ್ತು ₹2000 ಮುಖಬೆಲೆ ನೋಟುಗಳನ್ನು ಕೊಟ್ಟು ಬಿಲ್ ಪಾವತಿ ಮಾಡಿದ್ದರು.ಆಮೇಲೆ ನಾವು ನೋಟಿನ ಕಂತೆಗಳನ್ನು ಪರಿಶೀಲಿಸಿದಾಗ ಆಟಿಕೆ ನೋಟುಗಳು ಪತ್ತೆಯಾಗಿವೆ.ಆ ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂಬುದರ ಬದಲು ಭಾರತೀಯ ಮನೋರಂಜನ್ ಬ್ಯಾಂಕ್ ಎಂದು ಬರೆದಿತ್ತು.
ನೋಡಲು ನಿಜವಾದ ನೋಟಿನಂತೆ ಇದ್ದುದರಿಂದ ಸಂಶಯ ಬಂದಿರಲಿಲ್ಲ ಎಂದು ವರ್ಮಾ ಹೇಳಿದ್ದಾರೆ.

ಜ್ಯುವೆಲ್ಲರಿಯಲ್ಲಿ ಅಳಪಡಿಸಿದ್ದ ಸಿಸಿಟಿವಿಯಲ್ಲಿ ಎಲ್ಲ ದೃಶ್ಯಗಳು ಸೆರೆಯಾಗಿದ್ದು, ಮೋಸ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿರುವುದಾಗಿ ಜೋಧಾನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಜರ್ನೈಲ್ ಸಿಂಗ್ ಹೇಳಿದ್ದಾರೆ.
ಐಪಿಸಿ 420 (ವಂಚನೆ) ಆರೋಪದಡಿಯಲ್ಲಿ ಮೋಸ ಮಾಡಿದ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT