ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿಯನ್ನು ಟ್ಯಾಂಕ್‌ ಮೇಲೆ ಕೂರಿಸಿಕೊಂಡು ಬೈಕ್‌ ರೈಡಿಂಗ್‌: ವಿಡಿಯೊ ವೈರಲ್‌ 

Last Updated 4 ಮೇ 2019, 7:39 IST
ಅಕ್ಷರ ಗಾತ್ರ

ದೆಹಲಿ: ಯುವಕನೊಬ್ಬ ಬೈಕ್‌ನಟ್ಯಾಂಕ್‌ಮೇಲೆಯುವತಿಯೊಬ್ಬಳನ್ನು ಕೂರಿಸಿಕೊಂಡು ವೇಗವಾಗಿ, ಅಜಾಗರುಕವಾಗಿ ಬೈಕ್‌ ರೈಡ್‌ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದ್ದು, ಸಂಚಾರ ನಿಯಮ ಉಲ್ಲಂಘಿಸಿದ ಯುವಕನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸ್‌ ಅಧಿಕಾರಿ ಎಚ್‌ಜಿಎಸ್‌ ಧಲಿವಾಲ್‌ ಎಂಬುವವರು ದೆಹಲಿಯ ರಜೌರಿ ಗಾರ್ಡನ್‌ ಎಂಬಲ್ಲಿ ತಾವು ಕಂಡ ಸನ್ನಿವೇಶವನ್ನು ವಿಡಿಯೊ ಮಾಡಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಯುವಕನೊಬ್ಬ ಯುವತಿಯನ್ನು ಪಲ್ಸರ್‌ ಬೈಕ್‌ನ ಟ್ಯಾಂಕ್‌ ಮೇಲೆ ಕೂರಿಸಿಕೊಂಡು ಬೈಕ್‌ ಚಲಾಯಿಸುತ್ತಿರುವ ವಿಡಿಯೊ ಅದಾಗಿದೆ. ಟ್ಯಾಂಕ್‌ ಮೇಲೆ ಕುಳಿತ ಯುವತಿಯು ಯುವಕನ ಕಡೆ ಮುಖಮಾಡಿ ಆತನನ್ನು ಬಿಗಿದಪ್ಪಿಕೊಂಡಿರುತ್ತಾಳೆ. ಯುವಕ ಬೈಕ್‌ನ್ನು ಒಂದು ಬದಿಯಿಂದ ಮತ್ತೊಂದು ಬದಿಗೆಅಜಾಗರುಕನಾಗಿ ಚಲಾಯಿಸುತ್ತಿರುತ್ತಾನೆ.

ಇಂಥ ಘಟನೆಗಳನ್ನು ತಡೆಯಬೇಕಿದ್ದರೆ ಹೊಸದೊಂದು ವಾಹನ ನೀತಿಯನ್ನೇ ಜಾರಿಗೆ ತರಬೇಕಿದೆ ಎಂದು ಪೊಲೀಸ್‌ ಅಧಿಕಾರ್‌ ಎಚ್‌ಜಿಎಸ್‌ ಧಲಿವಾಲ್‌ ತಮ್ಮ ಟ್ವಿಟರ್‌ನಲ್ಲಿ ಅಭಿಪ್ರಾಪಟ್ಟಿದ್ದಾರೆ. ಅವರ ಅಭಿಪ್ರಾಯವನ್ನು ಎಲ್ಲರೂ ಬೆಂಬಲಿಸಿದ್ದಾರೆ.

ಇನ್ನೊಂದೆಡೆ ಸ್ವೇಚ್ಛಾಚಾರದ ವರ್ತನೆ ಬಗ್ಗೆ ಆಕ್ರೋಶವೂ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT