ದಂಪತಿಗೆ ಸಮಾಜ ಸೇವೆ ಶಿಕ್ಷೆ ವಿಧಿಸಿದ ಕೋರ್ಟ್‌!

ಶುಕ್ರವಾರ, ಏಪ್ರಿಲ್ 26, 2019
31 °C

ದಂಪತಿಗೆ ಸಮಾಜ ಸೇವೆ ಶಿಕ್ಷೆ ವಿಧಿಸಿದ ಕೋರ್ಟ್‌!

Published:
Updated:

ಕೊಚ್ಚಿ: ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದ ದಂಪತಿಗೆ ಎರ್ನಾಕುಲಂನ ಸರ್ಕಾರಿ ಆಸ್ಪತ್ರೆಯಲ್ಲಿ 100 ಗಂಟೆಗಳ ಕಾಲ ರೋಗಿಗಳ ಆರೈಕೆ ಮಾಡುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸಬೇಕು ಎಂದು ಕೇರಳ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಈ ಶಿಕ್ಷೆಗೆ ಒಳಗಾದವರು ಪ್ರೀತಾ ಶಾಜಿ ಮತ್ತು ಆಕೆಯ ಪತಿ. ಅವರು ಮಾಡಿಕೊಂಡಿದ್ದ ಸಾಲದ ಕಾರಣ ಅವರ ಮನೆ ಮತ್ತು ಆಸ್ತಿ, ಸಾಲ ವಸೂಲಾತಿ ನ್ಯಾಯಮಂಡಳಿ ತೀರ್ಪಿಗೆ ಅನುಗುಣವಾಗಿ ಹರಾಜಾಗಿತ್ತು.

ಆದರೆ, ಹರಾಜಿನಲ್ಲಿ ಮನೆ, ಆಸ್ತಿಯನ್ನು ಖರೀದಿಸಿದ ವ್ಯಕ್ತಿಗೆ ಆಸ್ತಿಯ ದಾಖಲಾತಿಗಳನ್ನು ಹಸ್ತಾಂತರಿಸಲು ದಂಪತಿ ನಿರಾಕರಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಮೇಲೆ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಯಿತು.

ಪತಿ, ಪತ್ನಿ ಇಬ್ಬರೂ ಎರ್ನಾಕುಲಂ ಆಸ್ಪತ್ರೆಯಲ್ಲಿ ಬೆಳಿಗ್ಗೆ 9.45ರಿಂದ ಸಂಜೆ 4 ಗಂಟೆಯವರೆಗೆ
(ಒಟ್ಟು 100 ಗಂಟೆ) ಸೇವೆ ಸಲ್ಲಿಸಬೇಕು ಎಂದು ಹೈಕೋರ್ಟ್‌ ವಿಭಾಗೀಯ ಪೀಠ ನಿರ್ದೇಶಿಸಿತು.

ಈ ಸೇವೆಯನ್ನು ದಂಪತಿ ಮಾಡದಿದ್ದರೆ ಅವರ ವಿರುದ್ಧ ಮತ್ತೊಂದು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

  • 13

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !