ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪ್ರತ್ಯೇಕ ‌ಧರ್ಮ: ಸಮಿತಿ ವರದಿ ‌ಪರಾಮರ್ಶಿಸಿ ಕೇಂದ್ರಕ್ಕೆ ‌ಶಿಫಾರಸು– ಸಿದ್ದರಾಮಯ್ಯ

Last Updated 3 ಮಾರ್ಚ್ 2018, 10:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಈಶಾನ್ಯ ರಾಜ್ಯಗಳಲ್ಲಿ ನಡೆದ ಚುನಾವಣೆ ಫಲಿತಾಂಶ ರಾಜ್ಯದ‌ ಮೇಲೆ ಯಾವುದೇ ಪರಿಣಾಮ ‌ಬೀರುವುದಿಲ್ಲ ಎಂದು ಮುಖ್ಯಮಂತ್ರಿ ‌ಸಿದ್ದರಾಮಯ್ಯ ಹೇಳಿದರು.

ನಗರದ ‌ವಿಮಾನ ನಿಲ್ದಾಣದಲ್ಲಿ‌‌ ಸುದ್ದಿಗಾರರೊಂದಿಗೆ ಮಾತನಾಡಿದ ‌ಅವರು, ಕರ್ನಾಟಕವನ್ನು ಕಾಂಗ್ರೆಸ್ ‌ಮುಕ್ತ ಮಾಡುವುದಾಗಿ ಬಿಜೆಪಿ ಯವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ.‌ ಆದರೆ, ಅವರ ಪಕ್ಷವೇ ಕರ್ನಾಟಕ ‌ಮುಕ್ತವಾಗಲಿದೆ ಎಂದರು.

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಕಳಸಾ ಬಂಡೂರಿ ಹೋರಾಟಗಾರರು‌ ತಮಗಾಗಿ‌ ಕಾಯುತ್ತಿರುವುದು ರಾಹುಲ್ ಗಾಂಧಿ ಅವರಿಗೆ‌ ಮಾಹಿತಿ ಇರಲಿಲ್ಲ. ಎಸ್ಪಿಜಿ ಅವರಿಗೆ ತಿಳಿಸುವ ಬದಲು ಹೋರಾಟಗಾರರು ಕಾಂಗ್ರೆಸ್ ಉಸ್ತುವಾರಿ ‌ಕೆ.ಸಿ. ವೇಣುಗೋಪಾಲ್ ಅಥವಾ ರಾಹುಲ್ ‌ಅವರ ಆಪ್ತ ಕಾರ್ಯದರ್ಶಿಗಳಿಗೆ ತಿಳಿಸಬೇಕಿತ್ತು. ಈ ಹಂತದಲ್ಲಿ ಸಂವಹನದಲ್ಲಿ ಹೆಚ್ಚು ‌ಕಡಿಮೆಯಾಗಿದೆ‌ ಎಂದು ಹೇಳಿದರು.

ಇವಿಎಂ ಯಂತ್ರಗಳ ಬದಲು ಮತಪತ್ರಗಳನ್ನು ಬಳಸಿ ಚುನಾವಣೆ ‌ನಡೆಸುವುದು‌ ಒಳ್ಳೆಯದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಲಿಂಗಾಯತ ಪ್ರತ್ಯೇಕ ‌ಧರ್ಮ: ವರದಿ ‌ಪರಾಮರ್ಶಿಸಿ ಶಿಫಾರಸು

ಲಿಂಗಾಯತ ಪ್ರತ್ಯೇಕ ‌ಧರ್ಮ ವಿಚಾರ ಕುರಿತು ಸಮಿತಿ ನೀಡಿದ ವರದಿಯನ್ನು ‌ಪರಾಮರ್ಶೆ‌ ನಡೆಸಿ ಕೇಂದ್ರಕ್ಕೆ ‌ಶಿಫಾರಸು ಮಾಡಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT