ಸುನಂದಾ ಸಾವು: ಶಶಿ ತರೂರ್ ವಿರುದ್ಧದ ಪ್ರಕರಣ ಸೆಷನ್ಸ್‌ ಕೋರ್ಟ್‌ಗೆ ವರ್ಗ

7

ಸುನಂದಾ ಸಾವು: ಶಶಿ ತರೂರ್ ವಿರುದ್ಧದ ಪ್ರಕರಣ ಸೆಷನ್ಸ್‌ ಕೋರ್ಟ್‌ಗೆ ವರ್ಗ

Published:
Updated:

ನವದೆಹಲಿ: ಸುನಂದಾ ಪುಷ್ಕರ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರ ವಿರುದ್ಧದ ಪ್ರಕರಣವನ್ನು ದೆಹಲಿ ಕೋರ್ಟ್‌ ಸೋಮವಾರ ಸೆಷನ್ಸ್‌ ಕೋರ್ಟ್‌ಗೆ ವರ್ಗಾಯಿಸಿದೆ. 

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಈ ಪ್ರಕರಣವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರುಣ್ ಭಾರದ್ವಜ್‌ ಅವರಿಗೆ ವರ್ಗಾಯಿಸಿದರು. 

ಸೆಷನ್ಸ್‌ ನ್ಯಾಯಾಲಯವು ಪೊಲೀಸರಿಗೆ ಜಾಗೃತ ವರದಿಯನ್ನು ಕಾಪಿಡುವಂತೆ ಸೂಚಿಸಿದೆ.

ಶಶಿ ತರೂರ್‌ ವಿರುದ್ಧ ಭಾರತೀಯ ದಂಡ ಸಂಹಿತೆ 498–ಎ(ಗಂಡ ಮತ್ತು ಆತನ ಸಂಬಂಧಿಕರು ಮಹಿಳೆಯನ್ನು ಕ್ರೂರವಾಗಿ ನಡೆಸಿಕೊಳ್ಳುವುದು) ಮತ್ತು 306 (ಆತ್ಮಹತ್ಯೆಗೆ ಕುಮ್ಮಕ್ಕು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !