ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಭಾರತಕ್ಕೆ ಅಮೆರಿಕದಿಂದ ₹22 ಕೋಟಿ

Last Updated 6 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಾಣು ವಿರುದ್ಧ ಸೆಣಸುತ್ತಿರುವ ಭಾರತಕ್ಕೆ ಅಮೆರಿಕ ₹ 22 ಕೋಟಿ ನೆರವು ಘೋಷಿಸಿದೆ.

ಯು.ಎಸ್‌.ಏಜೆನ್ಸಿ ಫಾರ್‌ ಇಂಟರ್‌ನ್ಯಾಷನಲ್‌ ಡೆವಲೆಪ್‌ಮೆಂಟ್‌ (ಯುಎಸ್‌ಎಐಡಿ) ಮೂಲಕ ಅಮೆರಿಕ ಸರ್ಕಾರ ಈ ನೆರವು ನೀಡಲಿದೆ. ಇದರೊಂದಿಗೆ ಕಳೆದ 20 ವರ್ಷಗಳ ಅವಧಿಯಲ್ಲಿ ಅಮೆರಿಕ ಸರ್ಕಾರ ಭಾರತಕ್ಕೆ ₹ 2,227 ಕೋಟಿ ನೆರವು ನೀಡಿದಂತಾಗಲಿದ್ದು, ಇದರಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡಿದ ನೆರವಿನ ಪ್ರಮಾಣ ₹1,063 ಕೋಟಿ

ಸದ್ಯ ಘೋಷಿಸಿರುವ ಹಣಕಾಸು ನೆರವು ಎರಡು ಸಂಘಟನೆಗಳ ಮೂಲಕ ಬಳಕೆ ಮಾಡಲಾಗುತ್ತದೆ. ಯುಎಸ್‌ಎಐಡಿಯ ಆರೋಗ್ಯ ಉತ್ತೇಜನಾ ಯೋಜನೆಯನ್ನು ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿಗೆ ಸೇರಿದ ಸಂಸ್ಥೆಯಾದ ‘ಜೆಎಚ್‌ಪಿಐಇಜಿಒ’ ಮೂಲಕ ಕೈಗೊಳ್ಳುವ ಕೋವಿಡ್‌–19 ನಿಯಂತ್ರಣ ಕಾರ್ಯಕ್ರಮಕ್ಕೆ ₹ 18.21 ಕೋಟಿ ನೀಡಲಾಗುತ್ತದೆ.

ಉಳಿದ ಮೊತ್ತ ₹ 3.79 ಕೋಟಿಯನ್ನು ವಿಶ್ವ ಆರೋಗ್ಯ ಸಂಸ್ಥೆ ರೂಪಿಸಿದ ಕಾರ್ಯಕ್ರಮದ ಮೂಲಕ ವಿನಿಯೋಗಿಸಲಾಗುತ್ತದೆ. ಈ ಹಣವನ್ನು ಕೋವಿಡ್‌–19ರಿಂದ ಬಳಲುವವರ ಚಿಕಿತ್ಸೆ–ಆರೈಕೆ, ಸೋಂಕು ಹರಡದಂತೆ ಸ್ಥಳೀಯವಾಗಿ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಭಾರತ ವ್ಯಯಿಸಲಿದೆ ಎಂದು ಮೂಲಗಳು ತಿಳಿಸಿವೆ.

ರೋಗ ನಿಯಂತ್ರಣಕ್ಕಾಗಿ ಭಾರತ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಭಾರತದಲ್ಲಿನ ಅಮೆರಿಕದ ರಾಯಭಾರಿ ಕೆನ್ನೆತ್‌ ಜಸ್ಟರ್‌, ‘ಅಮೆರಿಕ ನೀಡಿದನೆರವು ಕೋವಿಡ್‌–19ರ ವಿರುದ್ಧದ ಭಾರತದ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲಿದೆ’ಎಂದರು.

‘ಕೋವಿಡ್–19 ಸದ್ಯ ಜನರ ಆರೋಗ್ಯಕ್ಕೆ ಜಾಗತಿಕವಾಗಿ ಬೆದರಿಕೆಯೊಡ್ಡಿದೆ. ದೇಶಗಳ ಹಾಗೂ ಅಂತರರಾಷ್ಟ್ರೀಯ ಸಂಘಟನೆಗಳ ನಡುವಿನ ಸಮನ್ವಯದಿಂದ ಈ ರೋಗ ಒಡ್ಡಿರುವ ಸವಾಲನ್ನುಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT