ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ನಾಲ್ಕೇ ದಿನಕ್ಕೆ ದುಪ್ಪಟ್ಟು

ತಬ್ಲೀಗ್‌ ಪ್ರಕರಣದ ನಂತರ ಸೋಂಕಿತರ ಸಂಖ್ಯೆ ಏರಿಕೆ
Last Updated 5 ಏಪ್ರಿಲ್ 2020, 20:01 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ದಿಢೀರ್‌ ಏರಿಕೆಯಾಗಲು ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ನಡೆದತಬ್ಲೀಗ್‌ ಜಮಾತ್‌ ಸಭೆಯು ಪ್ರಮುಖ ಕಾರಣವಾಗಿದೆ.

ದೇಶದಲ್ಲಿ ಕೋವಿಡ್‌–19 ಪ್ರಕರಣಗಳು 4 ದಿನಗಳಲ್ಲಿ ದುಪ್ಪಟ್ಟಾಗುತ್ತಿವೆ.ಒಂದು ವೇಳೆ ತಬ್ಲೀಗ್‌ ಜಮಾತ್‌ ಸಭೆಯು ನಡೆಯದೇ ಹೋಗಿದ್ದರೆ 7 ದಿನಗಳಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿದ್ದವು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ತಿಳಿಸಿದರು.

‘ಗಾಳಿಯಿಂದ ಹರಡುವುದಿಲ್ಲ’: ‘ಕೋವಿಡ್‌–19 ಗಾಳಿ ಮೂಲಕ ಹರಡುತ್ತಿದೆಯೇ ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. ಪ್ರಸ್ತುತ ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ನಾವು ಇದಕ್ಕೆ ಉತ್ತರಿಸಬೇಕು. ಸೋಂಕು ದೃಢಪಟ್ಟ ರೋಗಿಯ ಮನೆಯವರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ರೋಗಿ ಉಸಿರಾಡುವ ಗಾಳಿಯನ್ನೇ ಅವರು ಉಸಿರಾಡುತ್ತಾರೆ. ರೋಗಿ ದಾಖಲಾದ ಆಸ್ಪತ್ರೆಯಲ್ಲಿರುವ ಇತರರಿಗೂ ಸೋಂಕು ತಗುಲಿಲ್ಲ. ಹೀಗಾಗಿ ಇದು ಗಾಳಿ ಮೂಲಕ ಹರಡುವುದಿಲ್ಲ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಮನ್‌ ಆರ್‌.ಗಂಗಾಖೇಡ್ಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT