ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ದೇಶದಲ್ಲಿ 700 ಮಂದಿಗೆ ಸೋಂಕು ದೃಢ, ಸಾವಿನ ಸಂಖ್ಯೆ 16ಕ್ಕೆ ಏರಿಕೆ

Last Updated 26 ಮಾರ್ಚ್ 2020, 15:11 IST
ಅಕ್ಷರ ಗಾತ್ರ

ನವದೆಹಲಿ: ದಿನದಿಂದ ದಿನಕ್ಕೆ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 700ಕ್ಕಿಂತಲೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದ್ದುಸಾವಿನ ಸಂಖ್ಯೆ16ಕ್ಕೇರಿದೆ.

ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ಮತ್ತಷ್ಟು ಬಿಗಿ
ಕೋವಿಡ್ -19 ನಿಯಂತ್ರಣಕ್ಕಾಗಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದರೂ ನಿಷೇಧಾಜ್ಞೆ ಉಲ್ಲಂಘಿಸುವ ಜನರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಮ್ಮು ಕಾಶ್ಮೀರ ಪೊಲೀಸರು ತೀರ್ಮಾನಿಸಿದ್ದಾರೆ.

ಇಂದೋರ್ ಆಸ್ಪತ್ರೆಯಲ್ಲಿ ಸೋಂಕು ಶಂಕಿತ ಸಾವು
ಕೊರೊನಾ ಸೋಂಕು ಶಂಕಿತ ವ್ಯಕ್ತಿಯೊಬ್ಬರು ಇಂದೋರ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ವೈದ್ಯಕೀಯ ವರದಿ ಇನ್ನೂ ಲಭ್ಯವಾಗಿಲ್ಲ.

ಯುರೋಪ್‌ನಲ್ಲಿ 250,000ಕ್ಕಿಂತಲೂ ಹೆಚ್ಚು ಪ್ರಕರಣ
ಯುರೋಪ್‌ನಲ್ಲಿ 250,000ಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದ್ದಾರೆ.

ಕೊರೊನಾ ಸಾಮೂಹಿಕವಾಗಿ ಹರಡುತ್ತದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ: ಆರೋಗ್ಯ ಸಚಿವ

ರಾಜಸ್ಥಾನದಲ್ಲಿ ವ್ಯಕ್ತಿ ಸಾವು

ಗುರುವಾರ ರಾಜಸ್ಥಾನದ ಭಿಲ್ವಾರದಲ್ಲಿ 73ರ ಹರೆಯದ ವ್ಯಕ್ತಿಯೊಬ್ಬರು ಕೋವಿಡ್- 19 ಸೋಂಕಿನಿಂದ ಸಾವಿಗೀಡಾಗಿದ್ದಾರೆ.ಇವರಿಗೆ ಬೇರೆ ಕಾಯಿಲೆಗಳು ಕೂಡಾ ಇತ್ತು ಎಂದು ರಾಜಸ್ಥಾನದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಅದೇ ವೇಳೆ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಜೈಪುರದ 45ರ ಹರೆಯದ ವ್ಯಕ್ತಿ ಮತ್ತು ಜುನ್‌ಜುನ್‌ನ 35ರ ಹರೆಯದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ, ಇವರಿಬ್ಬರೂ ವಿದೇಶಕ್ಕೆ ಹೋಗಿ ಬಂದವರಾಗಿದ್ದಾರೆ. ಇವರು ಸಂಪರ್ಕ ಹೊಂದಿರುವ ಎಲ್ಲ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಇಲ್ಲಿಯವರೆಗೆ ರಾಜಸ್ಥಾನದಲ್ಲಿ 40 ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 125ಕ್ಕೆ ಏರಿಕೆ

ಹರಿಯಾಣದಲ್ಲಿ 18 ಮಂದಿಗೆ ಸೋಂಕು ದೃಢ

ಹರಿಯಾಣದಲ್ಲಿ ಒಟ್ಟು 18 ಮಂದಿಗೆ ಸೋಂಕು ಇರುವುದಾಗಿ ದೃಢಪಟ್ಟಿದೆ. ಫರೀದಾಬಾದ್‌ನಲ್ಲಿ -2, ಗುರುಗ್ರಾಮ -10 , ಪಲ್ವಾಲ್-1, ಪಾಣಿಪತ್-3, ಪಂಚಕುಲಾ-1 , ಸೋನೆಪಥ್- 1 ಪ್ರಕರಣ ವರದಿಯಾಗಿದೆ.


ತೆಲಂಗಾಣದಲ್ಲಿ 3 ಪ್ರಕರಣ ದೃಢ
ತೆಲಂಗಾಣದಲ್ಲಿ ಮೂವರಿಗೆ ಸೋಂಕು ಇರುವುದಾಗಿ ದೃಢಪಟ್ಟಿದೆ. ಇಲ್ಲಿ 43 ಪ್ರಕರಣಗಳು ವರದಿಯಾಗಿದ್ದು, ಓರ್ವ ವ್ಯಕ್ತಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ತೆಲಂಗಾಣ ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.


ಸ್ಟೇಡಿಯಂ ಕೊರೊನಾ ಐಸೋಲೇಷನ್ ಕೇಂದ್ರವಾಗಿ ಮಾರ್ಪಾಡು
ಗುವಾಹಟಿಯಲ್ಲಿರುವ ಇಂದಿರಾಗಾಂಧಿ ಅಥ್ಲೆಟಿಕ್ಸ್ ಸ್ಟೇಡಿಯಂನ್ನು ಕೊರೊನಾ ವೈರಸ್ ಐಸೋಲೇಷನ್ ಕೇಂದ್ರವನ್ನಾಗಿ ಮಾರ್ಪಾಡು ಮಾಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ ಎಂದು ಅಸ್ಸಾಂ ಸಚಿವ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಇಲ್ಲಿಯವರೆಗೆ ಅಸ್ಸಾಂನಲ್ಲಿ ಕೋವಿಡ್-19 ಪ್ರಕರಣಗಳು ದಾಖಲಾಗಿಲ್ಲ.

ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಒಂದು ದಿನದ ಸಂಬಳ
ಕೋವಿಡ್-19 ವಿರುದ್ಧ ಹೋರಾಡಲು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ತಮ್ಮ ಒಂದು ದಿನದ ಸಂಬಳ ನೀಡಲು ಆಂಧ್ರಪ್ರದೇಶದ ವಿವಿಧ ನೌಕರರ ಸಂಘಗಳು ತೀರ್ಮಾನಿಸಿವೆ. ಈ ಮೂಲಕ 100 ಕೋಟಿ ಒಗ್ಗೂಡಿಸುವುದಾಗಿ ಸಂಘಟನೆಗಳು ಹೇಳಿವೆ.

ಅಂಡಮಾನ್ ನಿಕೋಬಾರ್‌ನಲ್ಲಿ ಒಂದು ಪ್ರಕರಣ
ಚೆನ್ನೈನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮಾರ್ಚ್ 24ರಂದು ಬಂದ ವ್ಯಕ್ತಿಯೊಬ್ಬರಿಗೆ ಕೋವಿಡ್-19 ಸೋಂಕು ಇರುವುದು ಪತ್ತೆಯಾಗಿದೆ ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿ ಚೇತನ್ ಸಾಂಘಿ ಹೇಳಿದ್ದಾರೆ.

ಕೈ ತೊಳೆದು ಬನ್ನಿ: ಪ್ರವಾಸಿಗರಿಗೆ ತಿಳಿ ಹೇಳಿದ ಲಡಾಕ್ ಜನತೆ
ಲಡಾಕ್ ಕೇಂದ್ರಾಡಳಿತ ಪ್ರದೇಶದ ಗಡಿ ನಿಯಂತ್ರಣಾ ರೇಖೆ ಬಳಿಯ ಗ್ರಾಮದ ಜನ ಕೋವಿಡ್-19 ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸುತ್ತಿದ್ದಾರೆ.ನಿಮ್ಮ ಕೈ ತೊಳೆದುಕೊಳ್ಳಿ, ಕೈ ತೊಳೆಯದೆ ನಮ್ಮ ಗ್ರಾಮಕ್ಕೆ ಪ್ರವೇಶಿಸಬೇಡಿ ಎಂದು ಇಲ್ಲಿನ ಲಟ್ಟೂಗ್ರಾಮದ ಜನರ ಫಲಕಗಳನ್ನು ಹಾಕಿದ್ದಾರೆ. ಸುಮಾರು 40-45 ಜನರು ಈ ಗ್ರಾಮದಲ್ಲಿದ್ದಾರೆ.ಇಂಗ್ಲಿಷ್ ಮತ್ತು ಉರ್ದು ಭಾಷೆಯಲ್ಲಿ ಈ ಫಲಕಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ13 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ.

ಮಲೇಷ್ಯಾದಲ್ಲಿ 235 ಹೊಸ ಪ್ರಕರಣ
ಮಲೇಷ್ಯಾದಲ್ಲಿ 235 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 2031ಕ್ಕೇರಿದೆ.

ಇರಾನ್‌ನಲ್ಲಿ ಸಾವಿನ ಸಂಖ್ಯೆ 2,234
ಇರಾನ್‌ನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 29,406ಕ್ಕೇರಿದ್ದು ಸಾವಿನ ಸಂಖ್ಯೆ 2,234 ಆಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT