ಭಾನುವಾರ, ಜೂಲೈ 12, 2020
28 °C

Covid-19 India Update: ದೇಶದಾದ್ಯಂತ ಶನಿವಾರ 2,411 ಕೊರೊನಾ ಪ್ರಕರಣ, 71 ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Coronavirus

ನವದೆಹಲಿ: ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ 37,776 ಜನರಲ್ಲಿ 10,000ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ತಿಳಿಸಿದೆ.  

ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 2,411 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, 71 ಸಾವು ಸಂಭವಿಸಿದೆ.

ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಸೋಂಕಿತರ ಸಂಖ್ಯೆ 37,776ಕ್ಕೆ ಏರಿಕೆಯಾಗಿದೆ. ಈ ಪೈಕಿ 1,223 ಜನ ಮೃತಪಟ್ಟಿದ್ದಾರೆ. 26,535 ಮಂದಿ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 10,018 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಈವರೆಗೆ ಅತಿಹೆಚ್ಚು ಪ್ರಕರಣಗಳು ದಾಖಲಾಗಿದ್ದು, 11,506 ಪ್ರಕರಣಗಳ ಪೈಕಿ 485 ಮಂದಿ ಮೃತಪಟ್ಟಿದ್ದಾರೆ. 1,879 ಜನರು ಗುಣಮುಖರಾಗಿದ್ದಾರೆ. ಗುಜರಾತಿನಲ್ಲಿ 4,721 ಪ್ರಕರಣಗಳ ಪೈಕಿ 236 ಜನ ಸಾವಿಗೀಡಾಗಿದ್ದಾರೆ. 735 ಜನರು ಗುಣಮುಖರಾಗಿದ್ದಾರೆ.

ದೆಹಲಿಯಲ್ಲಿ 3,738, ಮಧ್ಯಪ್ರದೇಶದಲ್ಲಿ 2,719  ಜನರು ಈವರೆಗೆ ಕೊರೊನಾ ವೈರಸ್ ಸೋಂಕು ಪೀಡಿತರಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು