ಮಂಗಳವಾರ, ಡಿಸೆಂಬರ್ 6, 2022
20 °C

ಹಜ್‌ ಯಾತ್ರೆಗೆ ಭಾರತೀಯರನ್ನು ಕಳುಹಿಸದೇ ಇರಲು ನಿರ್ಧಾರ: ಕೇಂದ್ರ ಸಚಿವ ನಖ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್–19 ಪಿಡುಗು ಹೆಚ್ಚುತ್ತಿರುವ ಕಾರಣ ಈ ವರ್ಷ ಭಾರತದಿಂದ ಹಜ್‌ ಯಾತ್ರೆಗಾಗಿ ಯಾರನ್ನೂ ಕಳುಹಿಸದಿರಲು ನಿರ್ಧರಿಸಲಾಗಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಮಂಗಳವಾರ ತಿಳಿಸಿದರು. 

ಸೌದಿ ಅರೇಬಿಯಾದ ಹಜ್‌ ಸಚಿವ ಮೊಹಮ್ಮದ್‌ ಸಲೇಹ್‌ ಅವರೊಂದಿಗೆ ಕಳೆದ ರಾತ್ರಿ ದೂರವಾಣಿ ಮೂಲಕ ಚರ್ಚೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಜ್‌ಯಾತ್ರೆಗಾಗಿ ಈ ಬಾರಿ ಯಾರನ್ನೂ ಕಳುಹಿಸದಂತೆ ಸಲೇಹ್‌ ಅವರೂ ಮನವಿ ಮಾಡಿದ್ದಾರೆ ಎಂದು ನಖ್ವಿ ಹೇಳಿದರು.

ಕೋವಿಡ್‌ ಹಿನ್ನೆಲೆಯಲ್ಲಿ, ಪವಿತ್ರವಾದ ಹಜ್‌ ಯಾತ್ರೆಯಲ್ಲಿ ಅಂತರರಾಷ್ಟ್ರೀಯ ಯಾತ್ರಾರ್ಥಿಗಳು ಭಾಗವಹಿಸುವುದಕ್ಕೆ ಸೌದಿ ಅರೇಬಿಯಾ ನಿರ್ಬಂಧ ಹೇರುವ ನಿರ್ಧಾರವನ್ನು ಆ ದೇಶವು ಸೋಮವಾರ ತೆಗೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು