ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೌಕ್‌ಡೌನ್, ಭೂಕುಸಿತದಿಂದ ಬಂದ್‌ ಆದ ಹೆದ್ದಾರಿ: ಅಗತ್ಯವಸ್ತುಗಳ ಕೊರತೆ

Last Updated 1 ಏಪ್ರಿಲ್ 2020, 17:48 IST
ಅಕ್ಷರ ಗಾತ್ರ

ಶ್ರೀನಗರ: ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಹಾಗೂ ಭೂ ಕುಸಿತದಿಂದಾಗಿ ಕಳೆದ ಆರು ದಿನಗಳಿಂದ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಬಂದ್‌ ಆಗಿರುವ ಪರಿಣಾಮ ಕಣಿವೆ ಪ್ರದೇಶದಲ್ಲಿ ಅಗತ್ಯವಸ್ತುಗಳ ಕೊರತೆ ಎದುರಾಗಿದೆ.

ಕಾಶ್ಮೀರ ಕಣಿವೆಗೆ ದೇಶದ ಇತರೆ ಭಾಗಗಳಿಂದ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗವಾದ 264 ಕಿ.ಮೀ ಉದ್ದದ ಈ ರಾಷ್ಟ್ರಿಯ ಹೆದ್ದಾರಿಯಲ್ಲಿ ಬುಧವಾರ ಭೂ ಕುಸಿತದಿಂದಾಗಿ 1,100 ಹೆಚ್ಚು ಅಗತ್ಯ ವಸ್ತುಗಳ ಸಾಗಿಸುವ ಟ್ರಕ್‌ಗಳು ಸಿಲುಕಿಕೊಂಡಿವೆ.

ಹೆದ್ದಾರಿಯ ಹಲವು ಕಡೆ ಭೂಕುಸಿತ ಉಂಟಾಗಿದೆ. ಮತ್ತೆ ಭೂ ಕುಸಿತ ಸಂಭವಿಸುವ ಅಪಾಯ ಇರುವುದರಿಂದ ರಸ್ತೆಯನ್ನು ಕಳೆದ ಆರು ದಿನಗಳಿಂದ ಬಂದ್‌ ಮಾಡಲಾಗಿದ್ದು, ರಸ್ತೆ ತೆರವು ಕಾರ್ಯಾಚರಣೆ ಮುಂದುವರೆದಿದೆ.

ಕೊರೊನಾ ಭೀತಿಯ ಇಂತಹ ಸಮಯದಲ್ಲಿ ಪದೇ ಪದೇ ಹೆದ್ದಾರಿ ಬಂದ್‌ ಆಗುತ್ತಿರುವುದರಿಂದ ಔಷಧಿ ಹಾಗೂ ಆಹಾರ ಪದಾರ್ಥಗಳ ಕೊರತೆ ಉಂಟಾಗಿದೆ. ಇದು ಹೀಗೆ ಮುಂದುವರೆದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು ಎನ್ನುತ್ತಾರೆ ಔಷಧಿ ವ್ಯಾಪಾರಿಗಳು.

ಕೆಲ ದಿನಗಳಿಂದ ಔಷಧಿಗಳು ಹೊಸದಾಗಿ ಪೂರೈಕೆ ಆಗಿಲ್ಲ. ಕೊರಾನ ನಿರ್ಬಂಧ ಬೇರೆ. ತಕ್ಷಣ ಪೂರೈಕೆಯಾಗದಿದ್ದಲ್ಲಿ ದಾಸ್ತಾನು ಶೀಘ್ರವೇ ಖಾಲಿ ಆಗುವ ಸಂಭವವಿದೆ ಎಂದು ಔಷಧಿ ವ್ಯಾಪಾರಿಯೊಬ್ಬರು ತಿಳಿಸಿದರು.

‘ಅಗತ್ಯ ವಸ್ತುಗಳ ಕೊರತೆಯಿಂದ ಉಂಟಾಗಿರುವ ಗಂಭೀರ ಪರಿಸ್ಥಿತಿಯನ್ನು ನಿವಾರಿಸಲು ಜನಸ್ನೇಹಿ ಮತ್ತು ಪ್ರಾಮಾಣಿಕ ಅಧಿಕಾರಿಗಳ ಒಳಗೊಂಡ ತುರ್ತು ನಿರ್ವಹಣಾ ಘಟಕವನ್ನು ರಚಿಸಬೇಕು’ ಎಂದು ಹಿರಿಯ ಅಧಿಕಾರಿಯೊಬ್ಬರು ಸಲಹೆ ನೀಡಿದರು.

‘ಈ ಸಮಸ್ಯೆ ಪರಿಹಾರಕ್ಕೆ ಒಂದು ಸಮಗ್ರ ಯೋಜನೆ ರೂಪಿಸಿ ಪ್ರತಿದಿನ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವಶ್ಯಕ ವಸ್ತುಗಳನ್ನು ಸುಲಲಿತವಾಗಿ ತರಲು ಸಮನ್ವಯ ತಂಡಗಳನ್ನು ರಚನೆ ಮಾಡಿಲಾಗಿದೆ. ಕೇಂದ್ರ ಸರ್ಕಾರವು ವೆಂಟಿಲೇಟರ್‌ ಹಾಗೂ ಹಾಗೂ ವೈದ್ಯಕೀಯ ಉಪಕರಣಗಳನ್ನು ಜಮ್ಮು ಮತ್ತು ಶ್ರೀನಗರಕ್ಕೆ ವಿಮಾನದ ಮೂಲಕ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಇಲಾಖೆ ಆಯುಕ್ತ ಅಟಲ್‌ ದುಲ್ಲೊ ’ಪ್ರಜಾವಾಣಿ’ ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT