ಬುಧವಾರ, ಜೂನ್ 3, 2020
27 °C
ಬೆಂಗಳೂರು ಮೂಲದ ಕಂಪನಿ ವಿಜ್ಞಾ ಲ್ಯಾಬ್ಸ್‌

ಕ್ವಾರಂಟೈನ್‌: ಚಲನವಲನ ಗಮನಿಸಲು ಆ್ಯಪ್‌ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ‘ಕೋವಿಡ್‌–19’ನಿಂದಾಗಿ ನೀವು ಕಡ್ಡಾಯ ಗೃಹವಾಸದಲ್ಲಿ ಇದ್ದೀರಾ? ಯಾರೂ ಗಮನಿಸುತ್ತಿಲ್ಲ ಎಂದೋ ಅಥವಾ ಕಣ್ತಪ್ಪಿಸಿ ಹೊರಗೆ ಹೋಗಬೇಡಿ. ನಿಮ್ಮ ಚಲನವಲನವನ್ನು ಮೂರನೇ ಕಣ್ಣು ಗಮನಿಸುತ್ತಿರಬಹುದು!

ಬೆಂಗಳೂರು ಮೂಲದ ಕಂಪನಿ ವಿಜ್ಞಾ ಲ್ಯಾಬ್ಸ್‌ ಈಗ, ‘ಹೋಂ ಕ್ವಾರಂಟೈನ್‌ ಟ್ರ್ಯಾಕಿಂಗ್‌ ಸಿಸ್ಟಮ್‌ (ಎಚ್‌ಕ್ಯೂಟಿಎಸ್‌) ಹೆಸರಿನ ವ್ಯವಸ್ಥೆ, ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ.

ಈ ಅನ್ವೇಷಣೆ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ತಂತ್ರಜ್ಞಾನವಾಗಿದೆ. ಸೆಲ್ಫಿ ಆಧರಿಸಿ ಮುಖಚಹರೆ ಗುರುತಿಸಲಿದ್ದು, ನಿರ್ದಿಷ್ಟ ವ್ಯಕ್ತಿಗಳ ನಡೆ ಗಮನಿಸಲಿದೆ. ಇದು, ಸ್ಥಳ ಪತ್ತೆ ಮೊಬೈಲ್‌ ಆ್ಯಪ್‌ ಮೂಲಕ ದಾಖಲಾಗಿದೆ.

ಈಗಾಗಲೇ ಮಹಾರಾಷ್ಟ್ರ ಪೊಲೀಸರು ಈ ಆ್ಯಪ್‌ ಅನ್ನು ಬಳಕೆ ಮಾಡುತ್ತಿದ್ದು, ಕಡ್ಡಾಯ ಗೃಹವಾಸದಲ್ಲಿ ಇರುವವವರ ಚಲನವಲನ ಗಮನಿಸುತ್ತಿದ್ದಾರೆ. ಪುಣೆ ಜಿಲ್ಲೆಯಲ್ಲಿ ಇದರ ಪ್ರಾಯೋಗಿಕ ಬಳಕೆ ಆಗುತ್ತಿದೆ.

‘ಅಲ್ಲಿ ಇನ್ನೂ 14 ಜಿಲ್ಲೆಗಳಲ್ಲಿ ಬಳಸಲು ನಿರ್ಧರಿಸಲಾಗಿದೆ. ಕೇರಳ ಪೊಲೀಸರೂ ಇದರ ಬಗ್ಗೆ ಆಸಕ್ತಿ ತೋರಿದ್ದಾರೆ’ ಎಂದು ಮಣಿಪಾಲ್ ಸಮೂಹದ ಸಿಟಿಒ, ವಿಜ್ಞಾ ಲ್ಯಾಬ್ಸ್‌ನ ಸ್ಥಾಪಕ ಡಾ.ಮುರಳಿ ಕೋಟಾ ಹೇಳಿದರು.

ಟ್ರ್ಯಾಕಿಂಗ್‌ ಸಿಸ್ಟಮ್ ಪ್ರಕಾರ,  ಮೊದಲಿಗೆ ವ್ಯಕ್ತಿಗಳ ಹೆಸರು, ದೂರವಾಣಿ ಸಂಖ್ಯೆ, ಸೆಲ್ಫಿ ಮತ್ತು ಇತರೆ ವಿವರಗಳನ್ನು ದಾಖಲಿಸಲಾಗುತ್ತದೆ. ಬಳಿಕ ನಿರ್ದಿಷ್ಟ ವ್ಯಕ್ತಿಗಳು ವ್ಯಕ್ತಿಗತ ವಿವರ ನೀಡಿ ಆ್ಯಪ್‌ ಬಳಸಿ ನೋಂದಣಿ ಮಾಡಿಕೊಳ್ಳಬೇಕು ಹಾಲಿ ಮಾಹಿತಿ ಜೊತೆಗೆ ಹೋಲಿಸಿ ಪರಿಶೀಲಿಸಲಾಗುತ್ತದೆ.

ಒಮ್ಮೆ ನೋಂದಣಿಯಾದ ಬಳಿಕ ಆ್ಯಪ್‌ ಸ್ವಯಂ ಚಾಲನೆ ಹೊಂದಲಿದ್ದು, ನಿರ್ದಿಷ್ಟ ವ್ಯಕ್ತಿಗ ನಿತ್ಯದ ಚಲನವಲನ ದಾಖಲಿಸುತ್ತಾ ಹೋಗಲಿದೆ. ಇದು, ಕ್ಲೌಡ್‌ ಆಧಾರಿತ ಎ.ಐ ಸರ್ವರ್‌ಗೆ ರವಾನೆಯಾಗಲಿದೆ. ಕ್ವಾರಂಟೈನ್‌ ಅವಧಿಯಲ್ಲಿ ವ್ಯಕ್ತಿ ಮನೆಯಿಂದ ಹೊರಬಂದರೂ ಪೊಲೀಸರು ಗಮನಿಸಬಹುದಾಗಿದೆ. ಲೈವ್‌ ಡ್ಯಾಷ್‌ಬೋರ್ಡ್‌ನಲ್ಲಿ ನಿತ್ಯದ ಹಾಜರಿ ದಾಖಲಾಗುತ್ತದೆ. ಗಮನಿಸಬೇಕಾದ ಅವಧಿಯನ್ನು ಹೊಂದಾಣಿಸಲು ಅವಕಾಶವಿದೆ ಎಂದು ಡಾ.ಮುರಳಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು