ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ | ಪರಿಸ್ಥಿತಿ ಸುಧಾರಿಸುತ್ತಿದೆ: ಹರ್ಷವರ್ಧನ್

Last Updated 26 ಏಪ್ರಿಲ್ 2020, 21:48 IST
ಅಕ್ಷರ ಗಾತ್ರ

ನವದೆಹಲಿ: ‘ಕೊರೊನಾ ವೈರಸ್ ಸೋಂಕಿಗೀಡಾಗಿದ್ದ ಅನೇಕ ಹಾಟ್‌ಸ್ಪಾಟ್ ಜಿಲ್ಲೆಗಳು (ಎಚ್‌ಎಸ್‌ಡಿ) ಈಗ ಹಾಟ್‌ಸ್ಪಾಟ್ ಅಲ್ಲದ ಜಿಲ್ಲೆಗಳಾಗುತ್ತಿದ್ದು ದೇಶದಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ಹೇಳಿದ್ದಾರೆ.

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್‌–ಏಮ್ಸ್‌) ಟ್ರಾಮಾ ಕೇರ್ ವಿಭಾಗಕ್ಕೆ ಭೇಟಿ ನೀಡಿದ್ದ ಸಚಿವರು, ಕೋವಿಡ್‌–19 ವಿರುದ್ಧದ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು.

ಕೋವಿಡ್‌–19 ನಿಯಂತ್ರಣಕ್ಕೆ ಏಮ್ಸ್‌ ದಿನದ 24 ತಾಸುಗಳ ಕಾಲ ಕೈಗೊಂಡಿರುವ ವ್ಯವಸ್ಥೆ ಯನ್ನು ಶ್ಲಾಘಿಸಿದ ಅವರು, ‘ಲಾಕ್‌ಡೌನ್‌ನಿಂದಾಗಿ ಕೋವಿಡ್‌–19 ಹರಡುವ ಪ್ರಮಾಣದಲ್ಲಿ ಇಳಿಕೆಯಾಗಿದೆ. ದೇಶದ ಅನೇಕ ಹಾಟ್‌ಸ್ಪಾಟ್ ಜಿಲ್ಲೆಗಳು ಈಗ ಹಾಟ್‌ಸ್ಪಾಟ್ ಪಟ್ಟಿಯಿಂದ ಹೊರಬಂದಿವೆ. ಭಾರತದ ಪರಿಸ್ಥಿತಿ ಸುಧಾರಣೆಯಾಗುತ್ತಿದೆ’ ಎಂದರು.

ಭೇಟಿ ವೇಳೆ ಸಚಿವರು, ವಿಡಿಯೊ ಕರೆ ಮೂಲಕ ಕೋವಿಡ್‌–19 ರೋಗಿಗಳೊಂದಿಗೆ ಮಾತನಾಡಿ, ಅವರ ಆರೋಗ್ಯವನ್ನು ವಿಚಾರಿಸಿದರು. ಆರೋಗ್ಯ ಸಚಿವಾಲಯವು ಏಪ್ರಿಲ್ 15ರಂದು ದೇಶದ 170 ಜಿಲ್ಲೆಗಳನ್ನು ಕೋವಿಡ್‌–19 ಹಾಟ್‌ಸ್ಪಾಟ್‌ಗಳೆಂದು ಮತ್ತು 207 ಜಿಲ್ಲೆಗಳನ್ನು ಹಾಟ್‌ಸ್ಪಾಟ್ ಅಲ್ಲದ ಜಿಲ್ಲೆಗಳೆಂದು ಗುರುತಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT