ಶನಿವಾರ, ಮೇ 30, 2020
27 °C

ಕೊರೊನಾ ಹಿನ್ನೆಲೆ: 1.7 ಕೋಟಿ ವೈಯಕ್ತಿಕ ರಕ್ಷಣಾ ಸಾಧನಗಳ ತಯಾರಿಕೆಗೆ ಕೇಂದ್ರ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವೈಯಕ್ತಿಕ ರಕ್ಷಣಾ ಸಾಧನಗಳು(personal protection equipment), ಮುಖಗವಸುಗಳು ಮತ್ತು ವೆಂಟಿಲೇಟರ್‌ಗಳ ಸರಬರಾಜು ಈಗ ಪ್ರಾರಂಭವಾಗಿದ್ದು, 20 ದೇಶಿ ತಯಾರಕ ಕಂಪನಿಗಳು ಈ ಸಾಧನಗಳನ್ನು ಅಭಿವೃದ್ಧಿಪಡಿಸಿವೆ. 1.7 ಕೋಟಿ ವೈಯಕ್ತಿಕ ರಕ್ಷಣಾ ಸಾಧನ ಮತ್ತು 49,000 ವೆಂಟಿಲೇಟರ್‌ಗಳನ್ನು ತಯಾರಿಸಲು ಆದೇಶಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. 

ಸುದ್ದಿಗೋಷ್ಠಿ ಉದ್ದೇಶಿಸಿ ಗುರುವಾರ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗ್ರವಾಲ್‌, 'ದೇಶದಲ್ಲಿ ಈವರೆಗೂ 473 ಜನರು ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಾರೆ. 5734 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ 549 ಹೊಸ ಪ್ರಕರಣಗಳು ದಾಖಲಾಗಿವೆ. 166 ಸಾವು ಸಂಭವಿಸಿವೆ' ಎಂದು ಹೇಳಿದರು. 

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಕೇಂದ್ರ ಆರೋಗ್ಯ ಇಲಾಖೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ತಿಳಿಸಿದ ಅವರು, 'ವೈಯಕ್ತಿಕ ರಕ್ಷಣಾ ಸಾಧನಗಳು(personal protection equipment), ಮುಖಗವಸುಗಳು ಮತ್ತು ವೆಂಟಿಲೇಟರ್‌ಗಳ ಸರಬರಾಜು ಈಗ ಪ್ರಾರಂಭವಾಗಿದ್ದು, 20 ದೇಶಿ ತಯಾರಕ ಕಂಪನಿಗಳು ಈ ಸಾಧನಗಳನ್ನು ಅಭಿವೃದ್ಧಿಪಡಿಸಿವೆ. 1.7 ಕೋಟಿ ವೈಯಕ್ತಿಕ ರಕ್ಷಣಾ ಸಾಧನ ಮತ್ತು 49,000 ವೆಂಟಿಲೇಟರ್‌ ತಯಾರಿಕೆಗೆ ಆದೇಶಿಸಲಾಗಿದೆ' ಎಂದರು.

80,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸುವ ಸಲುವಾಗಿ, ಭಾರತೀಯ ರೈಲುಗಳ 5,000 ಬೋಗಿಗಳನ್ನು ಪ್ರತ್ಯೇಕ ಘಟಕಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಅಗರ್‌ವಾಲ್‌ ತಿಳಿಸಿದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು