ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19 ಲಾಕ್ ಡೌನ್ : ಕೇವಲ 15 ದಿನದಲ್ಲಿ 116 ಮಂದಿ ವಲಸೆ ಕಾರ್ಮಿಕರ ಸಾವು

Last Updated 17 ಮೇ 2020, 7:20 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್19ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರುತಮ್ಮ ಊರುಗಳನ್ನು ಸೇರಲುನಡೆದುಕೊಂಡು ಅಥವಾ ವಾಹನಗಳಲ್ಲಿ ತೆರಳುವಾಗ ಸಂಭವಿಸಿದ ರಸ್ತೆಅಪಘಾತ, ರೈಲು ಅಪಘಾತಗಳಲ್ಲಿ 116 ಮಂದಿ ಮೃತಪಟ್ಟಿದ್ದರೆ, 150 ಮಂದಿ ಗಾಯಗೊಂಡಿದ್ದಾರೆ.

ವಲಸೆ ಕಾರ್ಮಿಕರಿಗೆ ಸರ್ಕಾರ ಮೇ 1 ರಿಂದ 16ರವರೆಗೆ 'ಶ್ರಮಿಕ ರೈಲು' ಆರಂಭಿಸಿದ ನಂತರ ಈ ಘಟನೆ ಸಂಭವಿಸಿದೆ. ಶನಿವಾರ ಉತ್ತರಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ 24 ಮಂದಿ ಮೃತಪಟ್ಟು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತಪಟ್ಟವರೆಲ್ಲಾ ರಾಜಸ್ಥಾನದಿಂದ ಜಾರ್ಖಂಡ್, ಪಶ್ಚಿಮ ಬಂಗಾಳ,ಬಿಹಾರದಲ್ಲಿರುವ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರು. ಇವರೆಲ್ಲಾ ಲಾರಿಯಲ್ಲಿ ತೆರಳುತ್ತಿದ್ದರು. ಎದುರು ಬಂದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಹರಿಯಾಣದಿಂದ ಬಿಹಾರಕ್ಕೆ ತೆರಳುತ್ತಿದ್ದ ದಂಪತಿಗಳು ಆಗ್ರಾದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರೆ, ಟ್ರಕ್ ನಲ್ಲಿದ್ದ ಆರು ಮಂದಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಅವರ ಕುಟುಂಬ ಸದಸ್ಯರು ಸೇರಿದಂತೆ 15 ಮಂದಿಗಾಯಗೊಂಡರು.

ಇಂತಹ ಅಪಘಾತಗಳು ವರದಿಯಾಗುತ್ತಿದ್ದಂತೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಎಲ್ಲಾ ರಾಜ್ಯಸರ್ಕಾರಗಳಿಗೆ ಪತ್ರ ಬರೆದು, ಯಾವುದೇ ವಲಸೆ ಕಾರ್ಮಿಕರು ರಸ್ತೆಯಲ್ಲಿ ನಡೆದು ಬರುತ್ತಿದ್ದರೆ ಅದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಅಲ್ಲದೆ, ರೈಲು ಹಳಿಗಳ ಮೇಲೆ ನಡೆಯುವುದು, ಮಲಗುವುದು ಕಂಡು ಬಂದರೆ ಕೂಡಲೆ ಆಯಾ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗೆ ಸಾರಿಗೆ ಸೌಲಭ್ಯ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ, ಶನಿವಾರ ಒಂದೇ ದಿನ ಸಂಭವಿಸಿದ ರಸ್ತೆ ಅಪಘಾತದಲ್ಲಿ 30 ಮಂದಿ ಭಾರತೀಯರು ಮೃತಪಟ್ಟಿದ್ದಾರೆ. ಇದಕ್ಕೆಪ್ರಧಾನಿ ನರೇಂದ್ರಮೋದಿನೇತೃತ್ವದ ಸರ್ಕಾರದಅವ್ಯವಸ್ಥೆಯೇ ಕಾರಣ. ಆ ನತದೃಷ್ಟರನ್ನು ನೆನೆಪಿಸಿಕೊಳ್ಳುವಮಾನವೀಯತೆ ಇಲ್ಲ, ಸೌಜನ್ಯಕೇಂದ್ರದ ಮಂತ್ರಿಗಳಿಗೆ ಇಲ್ಲ. ಕೇವಲ ಇವೆಂಟ್ ಮ್ಯಾನೇಜ್ ಮೆಂಟ್ ಮಾಡುವುದನ್ನೇ ಆಡಳಿತ ನಡೆಸುವುದು ಎಂದುಕೊಳ್ಳುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.

ವಲಸೆ ಕಾರ್ಮಿಕರು ಸುರಕ್ಷಿತವಾಗಿ ಅವರ ತವರು ರಾಜ್ಯಗಳಿಗೆ ತೆರಳುವುದೇ ಕಷ್ಟವಾಗಿರುವಾಗ ಹಣಕಾಸು ಸಚಿವೆ ಖಾಸಗಿಯವರಿಗೆ ಉಪಗ್ರಹಗಳು, ಉಡ್ಡಯನ ಮತ್ತು ಬಾಹ್ಯಾಕಾಶ ಆಧರಿತ ಸೇವೆಗಳಲ್ಲಿ ಖಾಸಗಿ ವಲಯದ ಕಂಪನಿಗಳಿಗೆ ಅವಕಾಶ ದೊರೆಯಲಿದೆ ಎಂದು ಹೇಳುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವಿಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.

ಮೂವರು ಖಾಸಗಿ ವ್ಯಕ್ತಿಗಳ ಸಂಶೋಧನೆ ಪ್ರಕಾರ, ಮೇ 1 ರಿಂದ ಮೇ 16ರವರೆಗೆ ಸಂಭವಿಸಿದ27 ರಸ್ತೆ ಮತ್ತು ರೈಲುಅಪಘಾತದಲ್ಲಿ 116 ಮಂದಿ ಮೃತಪಟ್ಟು 159 ಮಂದಿ ಮೃತಪಟ್ಟಿದ್ದಾರೆ.ಮೇ 16 ರಂದು ರಾಷ್ಟ್ರೀಯ ವಲಸೆ ಮಾಹಿತಿ ವ್ಯವಸ್ಥೆಯಲ್ಲಿ ಗೃಹ ಸಚಿವಾಲಯ ಸಿದ್ಧಪಡಿಸಿದ ಟಿಪ್ಪಣಿಯಲ್ಲಿ 350 ವಿಶೇಷ ರೈಲುಗಳಲ್ಲಿ 3.5 ಲಕ್ಷ ವಲಸೆ ಕಾರ್ಮಿಕರನ್ನು ಈವರೆಗೆ ಸ್ಥಳಾಂತರಿಸಲಾಗಿದೆ ಹಾಗೂ ಮುಂದೆಯೂ ವಲಸೆ ಕಾರ್ಮಿಕರಿಗಾಗಿಹೆಚ್ಚಿನ ರೈಲುಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.

ಮೇ ಆರಂಭದಲ್ಲಿ ಲಾಕ್‌ಡೌನ್ 2.0 ರ ಅಂತ್ಯಕ್ಕೆ ನಿರ್ಬಂಧಗಳ ವಿಸ್ತರಣೆಯ ಸುದ್ದಿ ಹೊರಹೊಮ್ಮುತ್ತಿದ್ದಂತೆ ವಲಸೆ ಕಾರ್ಮಿಕರ ಎರಡನೇ ಬಾರಿ ವಲಸೆಪ್ರಯಾಣಪ್ರಾರಂಭವಾಗಿದೆ. 'ಶ್ರಮಿಕ್ರೈಲುಗಳನ್ನು ಸಂಚಾರಕ್ಕೆ ಅವಕಾಶ ನೀಕೊಡ ಕೊಡುವಸರ್ಕಾರದ ಘೋಷಣೆಯು ವಲಸೆ ಕಾರ್ಮಿಕರ ಮನೆಗೆ ತೆರಳುವ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಲಸೆ ಕಾರ್ಮಿಕರು ಏಪ್ರಿಲ್ನಲ್ಲಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ತಿಂಗಳ ಅಂತ್ಯದಲ್ಲಿ ಅದರತೀವ್ರತೆ ಹೆಚ್ಚಾಯಿತು.

ದುರಂತದ ಘಟನೆಯಂದರೆ ಮೇ 7ರಂದು 16 ಮಂದಿ ವಲಸೆ ಕಾರ್ಮಿಕರ ಮೇಲೆ ಔರಂಗಾಬಾದ್ ಸಮೀಪ ರೈಲು ಹರಿದು ಮೃತಪಟ್ಟ ಘಟನೆ. ಇವರೆಲ್ಲಾ ರೈಲು ಹಳಿಗಳ ಮೇಲೆ ಮಲಗಿ ನಿದ್ರಿಸುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಈ ವಲಸೆ ಕಾರ್ಮಿಕರು ಮಧ್ಯಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದರು. ವಲಸೆ ಕಾರ್ಮಿಕರು ದಣಿದು ನಿದ್ರಿಸುತ್ತಿದ್ದಾಗ ಈ ಘಟನೆ ಸಂಭವಿಸಿತ್ತು.

ಮೇ 13ರಂದು ಪಂಜಾಬಿನಿಂದ ಕೆಲಸ ಮುಗಿಸಿ ಬರುತ್ತಿದ್ದ ಆರು ಮಂದಿ ವಲಸೆ ಕಾರ್ಮಿಕರಿಗೆಬಿಹಾರದ ಗೋಪಾಲಗಂಜ್ ಸಮೀಪ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಮಂದಿ ಗಾಯಗೊಂಡರು. ಮೇ 10 ರಂದು ಹೈದರಾಬಾದಿನಿಂದ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದಾಗ ಮಧ್ಯಪ್ರದೇಶದ ನರಸಿಂಗಾಪುರದ ಸಮೀಪಮಾವಿನಕಾಯಿ ತುಂಬಿದ ಲಾರಿಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT