ಸೋಮವಾರ, ಜೂನ್ 1, 2020
27 °C

ನಿಜಾಮುದ್ದೀನ್ ಮರ್ಕಜ್:ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಯತ್ನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಆತ್ಮಹತ್ಯೆ ಪ್ರಯತ್ನ– ಸಾಂಕೇತಿಕ ಚಿತ್ರ

ನವದೆಹಲಿ: ನಿಜಾಮುದ್ದೀನ್‌ನ ಮರ್ಕಜ್‌ನಿಂದ ಆಸ್ಪತ್ರೆಗೆ ಕರೆ ತರಲಾಗಿರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿರುವ ರಾಜೀವ್‌ ಗಾಂಧಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯ, 'ಮರ್ಕಜ್‌ನಿಂದ ಕರೆ ತರಲಾಗಿರುವ ಕರೊನಾ ಸೋಂಕಿತರು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸುತ್ತಿಲ್ಲ' ಎಂದು ತಿಳಿಸಿದ್ದಾರೆ.

'ಮರ್ಕಜ್‌ನಿಂದ ಬಂದಿರುವ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಪ್ರಯತ್ನಿಸಿದ. ಆದರೆ, ವೈದ್ಯರು ಅವರ ಪ್ರಾಣ ಪಣಕ್ಕಿಟ್ಟು ಆತನ ಪ್ರಯತ್ನವನ್ನು ತಪ್ಪಿಸಿದ್ದಾರೆ' ಎಂದಿದ್ದಾರೆ. 

ನಿಜಾಮುದ್ದೀನ್‌ ಪ್ರದೇಶದಲ್ಲಿ ಕಳೆದ ತಿಂಗಳು ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ 53 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಬುಧವಾರದ ವರೆಗೂ ದೆಹಲಿಯಲ್ಲಿ ಒಟ್ಟು 152 ಪ್ರಕರಣಗಳು ದಾಖಲಾಗಿವೆ. 

ಆಸ್ಪತ್ರೆ ಭದ್ರತೆಗೆ ಸಂಬಂಧಿಸಿದ ವಿಚಾರವನ್ನೂ ಪ್ರಸ್ತಾಪಿಸಲಾಗಿದ್ದು, ಗೃಹ ಕಾರ್ಯದರ್ಶಿಗಳ ಜೊತೆ ವೈದ್ಯರು ಹಾಗೂ ರೋಗಿಗಳಿಗೆ ಭದ್ರತೆ ಹೆಚ್ಚಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. 

ಕೆಲವು ರೋಗಿಗಳು ಆಕ್ರಮಣಕಾರಿಗಳಾಗಿ ವರ್ತಿಸುತ್ತಿದ್ದು, ಅದರಿಂದಾಗಿ ಯಾರೂ ಸಹ ಅವರ ಸಮೀಪ ಹೋಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ವೈದ್ಯರು ಎಳೆದು ಪ್ರಾಣ ಉಳಿಸಿದ್ದಾರೆ ಎಂದಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು