ಗೋ ಹತ್ಯೆ ಭಯೋತ್ಪಾದನೆಗಿಂತಲೂ ದೊಡ್ಡ ಅಪರಾಧ: ಬಿಜೆಪಿ ಶಾಸಕ 

7

ಗೋ ಹತ್ಯೆ ಭಯೋತ್ಪಾದನೆಗಿಂತಲೂ ದೊಡ್ಡ ಅಪರಾಧ: ಬಿಜೆಪಿ ಶಾಸಕ 

Published:
Updated:

ಜೈಪುರ: ಗೋ ಹತ್ಯೆ ಮಾಡುವುದು  ಭಯೋತ್ಪಾದನೆಗಳಿಗಿಂತಲೂ ದೊಡ್ಡ ಅಪರಾಧ ಎಂದು ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಹೇಳಿದ್ದಾರೆ.

ಗೋರಕ್ಷಕರ ದಾಳಿ ಹಾಗೂ ವ್ಯಕ್ತಿಗಳನ್ನು ಹೊಡೆದು ಸಾಯಿಸುವ ಪ್ರಕರಣಗಳ ಬಗ್ಗೆ ಮಾತನಾಡಿದ ಅಹುಜಾ, ಗೋ ಹತ್ಯೆ ಮಾಡುವಾಗ ಹಲವಾರು ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ. ಗೋಹತ್ಯೆ ಭಯೋತ್ಪಾದನೆಗಿಂತಲೂ ದೊಡ್ಡದು. ಉಗ್ರರು ನಾಲ್ಕೈದು ಮಂದಿಯನ್ನು ಕೊಲ್ಲುತ್ತಾರೆ ಆದರೆ ಗೋಹತ್ಯೆ ಮೂಲಕ ಕೋಟಿ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ

ಗೋವು ಕಳ್ಳಸಾಗಣೆ ಮಾಡುವವರಿಗೆ ಥಳಿಸಿ ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ತಿಳಿಸಿ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 14

  Angry

Comments:

0 comments

Write the first review for this !