ಭಾರತೀಯ ಪೌರತ್ವ ತ್ಯಜಿಸಿದ ಚೋಕ್ಸಿ

7
ಪಾಸ್‌ಪೋರ್ಟ್‌ ಮರಳಿಸಿದ ವಜ್ರಾಭರಣ ಉದ್ಯಮಿ

ಭಾರತೀಯ ಪೌರತ್ವ ತ್ಯಜಿಸಿದ ಚೋಕ್ಸಿ

Published:
Updated:
Prajavani

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪ ಹೊತ್ತಿರುವ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿ ತಮ್ಮ ಭಾರತೀಯ ಪಾಸ್‌ಪೋರ್ಟ್‌ ಹಿಂದಿರುಗಿಸಿದ್ದಾರೆ.

ಕಳೆದ ವರ್ಷ ಆ್ಯಂಟಿಗುವಾ ಮತ್ತು ಬರ್ಬುಡಾ ಪೌರತ್ವ ಪಡೆದಿರುವ ಚೋಕ್ಸಿ ಈಚೆಗೆ ಗಯಾನಾದಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಗೆ ಪಾಸ್‌ಪೋರ್ಟ್ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆ್ಯಂಟಿಗುವಾ ಮತ್ತು ಬರ್ಬುಡಾದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿ ಇಲ್ಲದ ಕಾರಣ ಗಯಾನದಲ್ಲಿರುವ ಭಾರತೀಯ ಹೈಕಮಿಷನ್‌ ಕಚೇರಿಗೆ ಪಾಸ್‌ಪೋರ್ಟ್ ಮರಳಿಸಿದ್ದಾರೆ. ಪಿಎನ್‌ಬಿಗೆ ವಂಚಿಸಿದ ವಜ್ರಾಭರಣ ಉದ್ಯಮಿಗಳಾದ ನೀರವ್‌ ಮೋದಿ ಮತ್ತು ಆತನ ಸಂಬಂಧಿ ಮೆಹುಲ್‌ ಚೋಕ್ಸಿ ಕಳೆದ ಜನವರಿ ಮೊದಲ ವಾರದಲ್ಲಿ ದೇಶ ತೊರೆದಿದ್ದರು. ಅದರ ಬೆನ್ನಲ್ಲೇ ಭಾರತ ಸರ್ಕಾರ ಈ ಇಬ್ಬರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿತ್ತು.

 

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !