ಪ್ರವಾಸೋದ್ಯಮ ತಾಣಗಳಾಗಿ 26 ದ್ವೀಪಗಳ ಅಭಿವೃದ್ಧಿ

7
ಪರಿಸರಕ್ಕೆ ಧಕ್ಕೆಯಾಗದಂತೆ ಪ್ರಧಾನಿ ಮೋದಿ ಸಲಹೆ

ಪ್ರವಾಸೋದ್ಯಮ ತಾಣಗಳಾಗಿ 26 ದ್ವೀಪಗಳ ಅಭಿವೃದ್ಧಿ

Published:
Updated:

ನವದೆಹಲಿ : ಪರಿಸರಕ್ಕೆ ಧಕ್ಕೆಯಾಗದಂತೆ ಲಕ್ಷದ್ವೀಪ, ಅಂಡಮಾನ ಮತ್ತು ನಿಕೋಬಾರ್‌ ಸೇರಿದಂತೆ 26 ದ್ವೀಪಗಳನ್ನು ಅತ್ಯುತ್ತಮ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ.

ಶನಿವಾರ ದ್ವೀಪಗಳ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನೆ ನಡೆಸಿದ ಪ್ರಧಾನಿ, ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ದ್ವೀಪಗಳಿಗೆ ಸಂಪರ್ಕ ಕಲ್ಪಿಸುವಂತೆ ನೀತಿ ಆಯೋಗದ ಅಧಿಕಾರಿಗಳ ಜತೆ ಸೂಚಿಸಿದ್ದಾರೆ.

ಲಕ್ಷದ್ವೀಪದಲ್ಲಿ ಹೇರಳವಾಗಿರುವ ಸಿಗುವ ಗೇದಾರ (ಟುನಾ) ಮೀನಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು ಸ್ಥಳೀಯ ಟುನಾ ಮೀನಿಗೆ ಬ್ರ್ಯಾಂಡ್‌ ಕಲ್ಪಿಸುವಂತೆ ಸಲಹೆ ಮಾಡಿದ್ದಾರೆ.

ಇಂಧನ ಸ್ವಾವಲಂಬನೆ, ಸೌರಶಕ್ತಿ ಬಳಕೆ, ಡಿಜಿಟಲ್‌ ಸಂಪರ್ಕ, ಕಸ ನಿರ್ವಹಣೆ, ಮೀನುಗಾರಿಕೆಗೆ ಉತ್ತೇಜನ, ಪ್ರವಾಸಿಗರಿಗೆ ಮೂಲಸೌಕರ್ಯ, ಪ್ರವಾಸೋದ್ಯಮ ಆಧಾರಿತ ಯೋಜನೆಗಳ ಕುರಿತು ನೀತಿ ಆಯೋಗದ ಅಧಿಕಾರಿಗಳು ವಿವರಿಸಿದರು.

ಗೃಹ ಸಚಿವ ರಾಜನಾಥ್‌ ಸಿಂಗ್‌, ಲಕ್ಷದ್ವೀಪ ಹಾಗೂ ಅಂಡಮಾನ ಮತ್ತು ನಿಕೋಬಾರ್‌ ದ್ವೀಪಗಳ ಲೆಫ್ಟಿನೆಂಟ್‌ ಗವರ್ನರ್‌ಗಳು, ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಸಭೆಯಲ್ಲಿ ಭಾಗವಹಿಸಿದ್ದರು.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !