ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಸಿಪಿಎಂ ಅಭ್ಯರ್ಥಿ ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ

Last Updated 18 ಏಪ್ರಿಲ್ 2019, 7:31 IST
ಅಕ್ಷರ ಗಾತ್ರ

ಕೋಲ್ಕತ್ತ:ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದ ಸಿಪಿಎಂ ಅಭ್ಯರ್ಥಿ, ಪಾಲಿಟ್ ಬ್ಯೂರೊ ಸದಸ್ಯ ಮುಹಮ್ಮದ್ ಸಲೀಂ ಅವರ ಬೆಂಗಾವಲು ವಾಹನಗಳಮೇಲೆ ಗುಂಡಿನ ದಾಳಿ ನಡೆದಿದೆ. ರಾಯ್‍ಗಂಜ್‌ನ ಇಸ್ಲಾಂಪುರದಲ್ಲಿ ಗುರುವಾರ ಈ ಘಟನೆ ನಡೆದಿದೆ.

ಮುಹಮ್ಮದ್ ಸಲೀಂ ಅವರ ಬೆಂಗಾವಲು ವಾಹನ ಹಾದು ಹೋಗುತ್ತಿದ್ದ ವೇಳೆ ಆಗಂತುಕರ ಗುಂಪೊಂದು ಗುಂಡು ಹಾರಿಸಿ, ಕಲ್ಲು ಮತ್ತು ಇಟ್ಟಿಗೆ ಎಸೆದು ದಾಳಿ ನಡೆಸಿತ್ತು. ಈ ವೇಳೆ ಮುಹಮ್ಮದ್ ಸಲೀಂ ಸಂಚರಿಸುತ್ತಿದ್ದ ಕಾರು ಹಾನಿಯಾಗಿದೆ.

ದಾಳಿ ನಂತರ ಮುಹಮ್ಮದ್ ಸಲೀಂ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದು, ಅವರು ಸುರಕ್ಷಿತರಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಈ ದಾಳಿ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡ ಇದೆ. ಶಸ್ತ್ರಾಸ್ತ್ರಗಳನ್ನು ಹೊಂದಿದ ದಾಳಿಕೋರರುಮತಗಟ್ಟೆಯಲ್ಲಿ ಮತದಾರರಿಗೂ ಬೆದರಿಕೆಯೊಡ್ಡಿದ್ದಾರೆ ಎಂದು ಸಲೀಂ ಆರೋಪಿಸಿದ್ದಾರೆ. ಈ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಚುನಾವಣಾ ಅಧಿಕಾರಿಗೆ ಚುನಾವಣಾ ಆಯೋಗ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT