‘ಬಡ್ತಿ ಮೀಸಲಾತಿ: ಕೆನೆ ಪದರ ಸೌಲಭ್ಯ ಅನ್ವಯ ಸಾಧ್ಯವಿಲ್ಲ’

7

‘ಬಡ್ತಿ ಮೀಸಲಾತಿ: ಕೆನೆ ಪದರ ಸೌಲಭ್ಯ ಅನ್ವಯ ಸಾಧ್ಯವಿಲ್ಲ’

Published:
Updated:

ನವದೆಹಲಿ:‍ ಪರಿಶಿಷ್ಟ ಜಾತಿ/ಪಂಗಡಗಳ (ಎಸ್‌ಸಿ/ಎಸ್‌ಟಿ) ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಮೀಸಲಾತಿ ಸೌಲಭ್ಯ ನಿರಾಕರಿಸಲು ‘ಕೆನೆ ಪದರ’ ಸೌಲಭ್ಯವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

‘ಎಸ್‌ಸಿ/ಎಸ್‌ಟಿ ಶ್ರೀಮಂತರಿಗೆ ಕೆನೆ ಪದರ ಅನ್ವಯಿಸಿ ಮೀಸಲಾತಿ ಸೌಲಭ್ಯ ನಿರಾಕರಿಸಬಹುದು ಎಂದು ಯಾವುದೇ ತೀರ್ಪಿನಲ್ಲಿಯೂ ಹೇಳಲಾಗಿಲ್ಲ’ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನಪೀಠಕ್ಕೆ ತಿಳಿಸಿದರು.  ‘ಎಸ್‌ಸಿ/ಎಸ್‌ಟಿ ಸಮುದಾಯದ ಕೆಲವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎನ್ನುವ ಮಾತ್ರಕ್ಕೆ ಜಾತಿ ಪಿಡುಗು ಅವರನ್ನು ಬಿಟ್ಟಿಲ್ಲ’ ಎಂದು  ನ್ಯಾಯಪೀಠಕ್ಕೆ ತಿಳಿಸಿದರು.

‘ಎಸ್‌ಸಿ/ಎಸ್‌ಟಿ ಸಮುದಾಯದ ಕೆಲವು ವರ್ಗಗಳನ್ನು ಮೀಸಲಾತಿಯಿಂದ ಹೊರಗಿರಿಸುವ ಕುರಿತು ನಿರ್ಣಯ ಕೈಗೊಳ್ಳುವುದು ನ್ಯಾಯಾಂಗ ವ್ಯಾಪ್ತಿಗೆ ಬರುವುದಿಲ್ಲ’ ಎಂದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !