ಸಿಎಸ್‌ಎಟಿ ನಾಮನಿರ್ದೇಶನ ನ್ಯಾಯಮೂರ್ತಿ ಸಿಕ್ರಿ ನಕಾರ

7

ಸಿಎಸ್‌ಎಟಿ ನಾಮನಿರ್ದೇಶನ ನ್ಯಾಯಮೂರ್ತಿ ಸಿಕ್ರಿ ನಕಾರ

Published:
Updated:

ನವದೆಹಲಿ: ಲಂಡನ್‌ ಮೂಲದ ಕಾಮನ್‌ವೆಲ್ತ್‌ ಸೆಕ್ರೆಟರಿಯಟ್‌ ಆರ್ಬಿಟಲ್ ಟ್ರಿಬ್ಯೂನಲ್‌ನ (ಸಿಎಸ್‌ಎಟಿ) ನಾಮನಿರ್ದೇಶನದ ಪ್ರಸ್ತಾವಕ್ಕೆ ನೀಡಿದ್ದ ಒಪ್ಪಿಗೆಯನ್ನು ನ್ಯಾಯಮೂರ್ತಿ ಎಕೆ ಸಿಕ್ರಿ ಭಾನುವಾರ ವಾಪಸ್‌ ಪಡೆದಿದ್ದಾರೆ.

ಸಿಎಸ್‌ಎಟಿ ಅಧ್ಯಕ್ಷ ಅಥವಾ ಸದಸ್ಯತ್ವ ಹುದ್ದೆಗೆ ಕೇಂದ್ರ ಸರ್ಕಾರ ಸಿಕ್ರಿ ಅವರನ್ನು ನಾಮನಿರ್ದೇಶನ ಮಾಡಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಬಳಿಕ ಸಿಕ್ರಿ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.

‘ಸರ್ಕಾರ ಕಳೆದ ತಿಂಗಳು ಸಿಎಸ್‌ಎಟಿಯಲ್ಲಿ ಹುದ್ದೆ ಸ್ವೀಕರಿಸುವಂತೆ ಸಿಕ್ರಿ ಅವರನ್ನು ಸಂಪರ್ಕಿಸಿತ್ತು. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದರು. ಪ್ರತಿ ವರ್ಷ ಎರಡು ಅಥವಾ ಮೂರು ವಿಚಾರಣೆಗಳಿಗೆ ಹಾಜರಾಗಬೇಕಾಗಿತ್ತು. ಆದರೆ, ಯಾವುದೇ ವೇತನ ನಿಗದಿಪಡಿಸಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ನ್ಯಾಯಮೂರ್ತಿ ಸಿಕ್ರಿ ಮಾರ್ಚ್‌ 6ರಂದು ನಿವೃತ್ತಿಯಾಗಲಿದ್ದಾರೆ. ಅಲೋಕ್‌ ವರ್ಮಾ ಅವರನ್ನು ಸಿಬಿಐ ಮುಖ್ಯಸ್ಥ ಹುದ್ದೆಯಿಂದ ವಜಾಗೊಳಿಸಲು ಸಿಕ್ರಿ ಅವರು ಚಲಾಯಿಸಿದ್ದ ಮತ ನಿರ್ಣಾಯಕವಾಗಿತ್ತು. ಈ ಬೆಳವಣಿಗೆಗಳ ಬಳಿಕ ಟೀಕೆಗಳು ವ್ಯಕ್ತವಾಗಿದ್ದರಿಂದ ಬೇಸರಗೊಂಡು ಸಿಕ್ರಿ ಹೊಸ ಹುದ್ದೆಯನ್ನು ಅಲಂಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಕಾಮನ್‌ವೆಲ್ತ್‌ನ 53 ಸದಸ್ಯ ರಾಷ್ಟ್ರಗಳ ನಡುವಣ ವಿವಾದಗಳನ್ನು ಇತ್ಯರ್ಥಗೊಳಿಸಲು ಸಿಎಸ್‌ಎಟಿ ಸ್ಥಾಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !