ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಎಸ್‌ಐಆರ್‌ನಲ್ಲಿ ಹಿತಾಸಕ್ತಿ ಸಂಘರ್ಷ’

Last Updated 21 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ:ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು (ಸಿಎಸ್‌ಐಆರ್‌) ಪ್ರತಿವರ್ಷ ಕೊಡುವ ‘ಅತ್ಯುತ್ತಮ ತಂತ್ರಜ್ಞಾನ ಪ್ರಶಸ್ತಿ’ ಆಯ್ಕೆಯ ವೇಳೆ ಹಿತಾಸಕ್ತಿ ಸಂಘರ್ಷ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. 2018ನೇ ಸಾಲಿನ ಪ್ರಶಸ್ತಿಗೆ ಸಂಬಂಧಿಸಿದಂತೆ ಈ ಆರೋಪ ಕೇಳಿಬಂದಿದೆ.

2018ನೇ ಸಾಲಿನಲ್ಲಿ ಚಂಡೀಗಡದ ಮೈಕ್ರೊಬಯಾಲ್ ಸಂಸ್ಥೆಯ ಸಂಶೋಧಕರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಹೃದಯಾಘಾತದ ಸಂದರ್ಭದಲ್ಲಿ ರೋಗಿಗೆ ನೀಡಲಾಗುವ ‘ಕ್ಲಾಟ್‌ ಬಸ್ಟರ್‌’ ಔಷಧದ ಸಂಶೋಧನೆಗೆ ಈ ಸಂಸ್ಥೆಯ ಸಂಶೋಧಕರ ತಂಡ ಆಯ್ಕೆಯಾಗಿತ್ತು.

ಆದರೆ ಈ ತಂಡದ ಮುಖ್ಯಸ್ಥರಾಗಿದ್ದ ಗಿರೀಶ್ ಸಹಾನಿ ಅವರು ಸಿಎಸ್‌ಐಆರ್‌ ನಿರ್ದೇಶಕರಾಗಿದ್ದಾಗಲೇ, ಆ ತಂಡ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಹೀಗಾಗಿ ಗಿರೀಶ್ ಸಹಾನಿ ಅವರ ವಿರುದ್ಧ ಸಿಎಸ್‌ಐಆರ್‌ನ ಹಲವು ಸದಸ್ಯರು ಹಿತಾಸಕ್ತಿ ಸಂಘರ್ಷದ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಹಾನಿ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT