ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುತ್ತಿದ್ದಂತೆ ಬಿರುಸುಗೊಂಡ 'ಫೋನಿ'

ಭಾನುವಾರ, ಮೇ 26, 2019
33 °C

ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುತ್ತಿದ್ದಂತೆ ಬಿರುಸುಗೊಂಡ 'ಫೋನಿ'

Published:
Updated:

ಕೋಲ್ಕತ್ತ: ಪಶ್ಚಿಮ ಬಂಗಾಳ ಪ್ರವೇಶಿಸುತ್ತಿದ್ದಂತೆ ಫೋನಿ ಚಂಡಮಾರುತ ಬಿರುಸುಗೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಶುಕ್ರವಾರ ಬೆಳಗ್ಗೆ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಫೋನಿ, ಸಂಜೆ ಹೊತ್ತಿಗೆ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಿದೆ. ಈಗಾಗಲೇ ಫೋನಿ ಆರ್ಭಟದಿಂದ ಹಲವಾರು ನಾಶ ನಷ್ಟ ಸಂಭವಿಸಿದ್ದು, ಅದರ ತೀವ್ರತೆ ಇನ್ನಷ್ಟು ಜಾಸ್ತಿಯಾಗಿದೆ. ಬಂಗಾಳ ಪ್ರವೇಶಿಸಿ ಕೋಲ್ಕತ್ತಗೆ ಧಾವಿಸುವ ಹೊತ್ತಲ್ಲಿ ಚಂಡಮಾರುತ ಬಿರುಸುಗೊಂಡಿದೆ ಎಂದು ರಾಷ್ಟ್ರೀಯ ಹಮಾಮಾನ ಇಲಾಖೆ ಕೋಲ್ಕತ್ತದ ಉಪ ನಿರ್ದೇಶಕ ಸಂಜೀಬ್ ಬಂದೋಪಧ್ಯಾಯ್ ಹೇಳಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸುವ ಹೊತ್ತಲ್ಲಿ ಚಂಡಮಾರುತದ ವೇಗ ಗಂಟೆಗೆ 90-110/115 ಕಿ.ಮಿನಷ್ಟಿರಲಿದೆ ಎಂದು ಬಂದೋಪಾಧ್ಯಾಯ್  ಹೇಳಿದ್ದಾರೆ. 
 

ಬರಹ ಇಷ್ಟವಾಯಿತೆ?

  • 8

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !