ಫೋನಿ ಅಬ್ಬರ: ಹಾರಿ ಹೋಯಿತು ಏಮ್ಸ್‌ ಹಾಸ್ಟೆಲ್ ಛಾವಣಿ, ಭರದಿಂದ ಸಾಗಿದ ಕಾರ್ಯಾಚರಣೆ

ಮಂಗಳವಾರ, ಮೇ 21, 2019
24 °C

ಫೋನಿ ಅಬ್ಬರ: ಹಾರಿ ಹೋಯಿತು ಏಮ್ಸ್‌ ಹಾಸ್ಟೆಲ್ ಛಾವಣಿ, ಭರದಿಂದ ಸಾಗಿದ ಕಾರ್ಯಾಚರಣೆ

Published:
Updated:

ಒಡಿಶಾದಲ್ಲಿ ಫೋನಿ ಅಬ್ಬರ ಜೋರಾಗಿದೆ. ಕರಾವಳಿ ತೀರ ಸೇರಿದಂತೆ ಪುರಿಯ ಸುತ್ತ ಮುತ್ತಲಿನಲ್ಲಿ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಸಾವಿರಾರು ಮರಗಳು ಸೇರಿದಂತೆ, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಒಡಿಶಾದ ರಾಜಧಾನಿ ಭುವನೇಶ್ವರ ಸೇರಿದಂತೆ ಕರಾವಳಿ ತೀರದ 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಒಡಿಶಾ ಮಾತ್ರವಲ್ಲದೆ ಆಂಧ್ರ ಹಾಗೂ ಪಶ್ಚಿಮ ಬಂಗಾಳ ಕರಾವಳಿ ತೀರದಲ್ಲಿಯೂ ಸಾಕಷ್ಟು ಹಾನಿ ಸಂಭವಿಸುವ ಸಾಧ್ಯತೆಯಿದ್ದು, ಅನಾಹುತ ತಪ್ಪಿಸಲು ವಿಪತ್ತು ನಿರ್ವಹಣಾ ಪಡೆಗಳು, ಸೇನೆ, ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಇದನ್ನೂ ಓದಿ: ಒಡಿಶಾದಲ್ಲಿ ಫೋನಿ ಆರ್ಭಟಕ್ಕೆ 5 ಬಲಿ, ಸಾವಿರಾರು ಮರಗಳು ನಾಶ

ಹಾನಿಯಾಗಿರುವ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್‌) ಹಾಗೂ ಒಡಿಶಾ ಪೊಲೀಸ್‌ ಇಲಾಖೆ ಆ ಸ್ಥಳದ ಚಿತ್ರಣ ಕಟ್ಟಿಕೊಡವು ಸರಣಿ ಟ್ವೀಟ್‌ಗಳನ್ನು ಪ್ರಕಟಿಸಿವೆ.

‘ಒಡಿಶಾದ ಕಟಕ್‌ ನಗರಕ್ಕೆ ಚಂಡಮಾರುತ ಅಪ್ಪಳಿಸಿದೆ. ರಸ್ತೆ ಬದಿಗಳಲ್ಲಿದ್ದ ಹಲವು ಮರಗಳು ಧರೆಗುರುಳಿವೆ. ಒಡಿಶಾ ಡಿಜಿಪಿ ನಿರ್ದೇಶನದ ಮೇರೆಗೆ, ಕಟಕ್‌ ಡಿಸಿಪಿ ಹಾಗೂ ಒರಿಸ್ಸಾ ವಿಪತ್ತು ನಿರ್ವಹಣೆ ಕ್ಷಿಪ್ರ ಕಾರ್ಯಪಡೆಯ ಮರಗಳ ತೆರವು ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಒಡಿಶಾ ಪೊಲೀಸ್‌ ಟ್ವೀಟ್‌ ಮಾಡಿದೆ.

ಕೇಂದ್ರಪುರ ಎಂಬಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ  ಸ್ಥಳೀಯರನ್ನು ಸ್ಥಳಾಂತರಿಸುತ್ತಿರುವ ಸಿಬ್ಬಂದಿ.

ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್‌ ಕಾರ್ಯಾಚರಣೆ.

ಚಂಡಮಾರುತ ಸಂತ್ರಸ್ತರಿಗಾಗಿ ಕರಾವಳಿ ರಕ್ಷಣಾ ಪಡೆಯ ನೌಕೆಯ ಮೂಲಕ ಸಾಗಿಸುತ್ತಿದ್ದ ಆಹಾರ ಪೊಟ್ಟಣ, ಕುಡಿಯುವ ನೀರು ಸೇರಿದಂತೆ ಮತ್ತಿತರ ಪರಿಹಾರ ಸಾಮಾಗ್ರಿಗಳನ್ನು ರಕ್ಷಣಾ ಪಡೆಯ ಹೆಲಿಕಾಪ್ಟರ್‌ಗೆ ತುಂಬಿಸುತ್ತಿರುವುದು.

ಒಡಿಶಾ ರಾಜಧಾನಿ ಭುವನೇಶ್ವರದ ಏಮ್ಸ್‌ ಹಾಸ್ಟೆಲ್‌ನ ಮೇಲ್ಛಾವಣಿ ಚಂಡಮಾರುತಕ್ಕೆ ಸಿಲುಕಿ ಹಾರಿಹೋಯಿತು.

*

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !