ತಮಿಳುನಾಡಿಗೆ ಚಂಡಮಾರುತದ ಮುನ್ಸೂಚನೆ

ಸೋಮವಾರ, ಮೇ 27, 2019
27 °C

ತಮಿಳುನಾಡಿಗೆ ಚಂಡಮಾರುತದ ಮುನ್ಸೂಚನೆ

Published:
Updated:

ನವದೆಹಲಿ: ಹಿಂದೂ ಮಹಾಸಾಗರ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಪಕ್ಕದಲ್ಲಿರುವ ಕಡಿಮೆ ಒತ್ತಡ ಪ್ರದೇಶದಲ್ಲಿ ಚಂಡಮಾರುತ ಶಕ್ತಿ ಗಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ.

ಈ ಚಂಡಮಾರುತ ಮತ್ತಷ್ಟು ಪ್ರಬಲವಾಗಿ ಪಶ್ಚಿಮ ಮತ್ತು ವಾಯವ್ಯ ಭಾಗಕ್ಕೆ ಸಂಚರಿಸಲಿದೆ. ಚಂಡಮಾರುತದ ದಿಶೆಯು ಸಮುದ್ರ ಮಟ್ಟದಿಂದ  3.1 ಕಿಮೀ ಮೇಲೆ ಇದ್ದು, ಹಿಂದೂ ಮಹಾಸಾಗರದ ಮಧ್ಯೆ ಮತ್ತು ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯಭಾಗದಿಂದ ಆಗ್ನೇಯ ಶ್ರೀಲಂಕಾದ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಲಿದೆ.

ಮುಂದಿನ 36 ಗಂಟೆಗಳಲ್ಲಿ ಇದು ಮತ್ತಷ್ಟು ಪ್ರಬಲಗೊಳ್ಳಲಿದ್ದು, ತಮಿಳುನಾಡಿನ ಕರಾವಳಿ ಮತ್ತು ಶ್ರೀಲಂಕಾದ ಪೂರ್ವ ಕರಾವಳಿಯತ್ತ ಮುನ್ನುಗ್ಗಲಿದೆ. 48 ಗಂಟೆಗಳಲ್ಲಿ ಇದು ಇನ್ನಷ್ಟು ಪ್ರಬಲವಾಗಲಿದೆ.

ತಮಿಳುನಾಡು ಮತ್ತು ಪುದುಚ್ಚೇರಿಯ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ ಹವಾಮಾನ ಇಲಾಖೆ,  ಭಾರಿ ಗಾಳಿ ಮತ್ತು ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !